ಟಿ20 ಪಂದ್ಯದಲ್ಲಿ ತಂಡವೊಂದಕ್ಕೆ 120 ಎಸೆತಗಳು ಸಿಗಲಿವೆ. ಅದೇ ರೀತಿ 100 ಬಾಲ್ ಟೂರ್ನಿಯಲ್ಲಿ ಪ್ರತಿ ತಂಡದ ಇನ್ನಿಂಗ್ಸ್ 100 ಎಸೆತಗಳನ್ನು ಒಳಗೊಂಡಿರಲಿದೆ.
ಲಂಡನ್[ಡಿ.01]: ಟಿ20 ಕ್ರಿಕೆಟ್‌ನ ಜನಪ್ರಿಯತೆ ಹೆಚ್ಚುತ್ತಿರುವ ಸಮಯದಲ್ಲಿ ಟಿ10 ಎನ್ನುವ 10 ಓವರ್ ಕ್ರಿಕೆಟ್ ಆರಂಭಗೊಂಡಿದೆ. ಇದೀಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ)ತನ್ನ ಮಹತ್ವಾಕಾಂಕ್ಷೆಯ 100 ಬಾಲ್ ಕ್ರಿಕೆಟ್ ಟೂರ್ನಿಯನ್ನು 2020ರಲ್ಲಿ ಆರಂಭಿಸಲಿದ್ದು, ಅಭಿಮಾನಿಗಳು ಹೊಸ ರೂಪದಲ್ಲಿ ಕ್ರಿಕೆಟ್ ಆಟವನ್ನು ನೋಡಲಿದ್ದಾರೆ. ಈ ಟೂರ್ನಿಯ ನಿಯಮಗಳನ್ನು ಇಸಿಬಿ ಪ್ರಕಟಿಸಿದೆ.
ನಿಯಮಗಳು ಹೇಗಿವೆ?: ಟಿ20 ಪಂದ್ಯದಲ್ಲಿ ತಂಡವೊಂದಕ್ಕೆ 120 ಎಸೆತಗಳು ಸಿಗಲಿವೆ. ಅದೇ ರೀತಿ 100 ಬಾಲ್ ಟೂರ್ನಿಯಲ್ಲಿ ಪ್ರತಿ ತಂಡದ ಇನ್ನಿಂಗ್ಸ್ 100 ಎಸೆತಗಳನ್ನು ಒಳಗೊಂಡಿರಲಿದೆ.
ಸಾಂಪ್ರದಾಯಿಕ 6 ಎಸೆತಗಳ ಓವರ್ ಬದಲಿಗೆ 10 ಎಸೆತಗಳ 10 ಓವರ್ ಇರಲಿವೆ. ಒಂದು ಓವರನ್ನು ಒಬ್ಬ ಇಲ್ಲವೇ ಇಬ್ಬರು ಬೌಲರ್‌ಗಳು ಸೇರಿ ಮುಕ್ತಾಯಗೊಳಿಸಬಹುದು. ಅಂದರೆ ಬೌಲರ್ ಒಬ್ಬ ಸತತವಾಗಿ 5 ಇಲ್ಲವೇ 10 ಎಸೆತಗಳನ್ನು ಹಾಕಬಹುದು. ಒಬ್ಬ ಬೌಲರ್‌ಗೆ ಗರಿಷ್ಠ 20 ಎಸೆತಗಳನ್ನು ಎಸೆಯುವ ಅವಕಾಶವಿರಲಿದೆ.
