ಮೆಲ್ಬರ್ನ್‌(ಡಿ.12): 8ನೇ ಆವೃತ್ತಿಯ ಬಿಗ್‌ ಬ್ಯಾಷ್‌ ಲೀಗ್‌(ಬಿಬಿಎಲ್‌) ಟಿ20ಯಲ್ಲಿ ಇನ್ಮುಂದೆ ನಾಣ್ಯದ ಬದಲಿಗೆ ಬ್ಯಾಟ್‌ ಮೂಲಕ ಟಾಸ್‌ ಹಾಡಲು ನಿರ್ಧರಿಸಲಾಗಿದೆ. 

ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡಗಳ ನಾಯಕರಿಗೆ ನಾಣ್ಯ ಚಿಮ್ಮಿಸುವ ಮೂಲಕ ಬ್ಯಾಟಿಂಗ್‌ ಅಥವಾ ಫೀಲ್ಡಿಂಗ್‌ ಆಯ್ಕೆಯ ಅವಕಾಶ ನೀಡಲಾಗುತ್ತಿತ್ತು. ಈ ವೇಳೆ ನಾಯಕನಾದವನು ‘ಹೆಡ್ಸ್‌’ ಅಥವಾ ‘ಟೇಲ್ಸ್‌’ ಎಂದು ಕೂಗಬೇಕಿತ್ತು. ಆದರೆ ಈಗ ಬ್ಯಾಟ್‌ ಚಿಮ್ಮಿಸುವ ವೇಳೆ, ನಾಯಕರು ‘ಹಿಲ್ಸ್‌’ ಅಥವಾ ‘ಫ್ಲಾಟ್ಸ್‌’ ಎಂದು ಕೂಗಬೇಕಿದೆ. 

ಡಿ.19ರಿಂದ ಲೀಗ್‌ ಆರಂಭವಾಗಲಿದ್ದು, ಹಾಲಿ ಚಾಂಪಿಯನ್ ಅಡಿಲೇಡ್ ಸ್ಟ್ರೈಕರ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.