ಮಾರ್ಕ್ ಸ್ಟೋನಿಸ್, ಜೇಸನ್ ಬೆಹ್ರೆನ್’ಡ್ರಾಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರೆ, ಅನುಭವಿ ಬೌಲರ್’ಗಳಾದ ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್, ನಾಥನ್ ಲಯನ್ ಹಾಗೂ ಆಲ್ರೌಂಡರ್ ಮಿಚೆಲ್ ಮಾರ್ಷ್’ಗೆ ತಂಡದಿಂದ ಕೋಕ್ ನೀಡಲಾಗಿದೆ. ಭಾರತ ತಂಡವು ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನವೆಂಬರ್ 21ರಂದು ಬ್ರಿಸ್ಬೇನ್’ನಲ್ಲಿ ನಡೆಯುವ ಮೊದಲ ಟಿ20 ಕದನದಲ್ಲಿ ಭಾರತ ತಂಡವು ಕಾಂಗರು ಪಡೆಯನ್ನು ಎದುರಿಸಲಿದೆ
ಸಿಡ್ನಿ[ನ.08]: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಹಾಗೂ ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ 13 ಆಟಗಾರರನ್ನೊಳಗೊಂಡ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು ಆ್ಯರೋನ್ ಫಿಂಚ್ ತಂಡವನ್ನು ಮುನ್ನಡೆಸಲಿದ್ದಾರೆ.
ಮಾರ್ಕ್ ಸ್ಟೋನಿಸ್, ಜೇಸನ್ ಬೆಹ್ರೆನ್’ಡ್ರಾಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದರೆ, ಅನುಭವಿ ಬೌಲರ್’ಗಳಾದ ಮಿಚೆಲ್ ಸ್ಟಾರ್ಕ್, ಪೀಟರ್ ಸಿಡ್ಲ್, ನಾಥನ್ ಲಯನ್ ಹಾಗೂ ಆಲ್ರೌಂಡರ್ ಮಿಚೆಲ್ ಮಾರ್ಷ್’ಗೆ ತಂಡದಿಂದ ಕೋಕ್ ನೀಡಲಾಗಿದೆ. ಮುಂಬರುವ ವಿಶ್ವಕಪ್ ಹಾಗೂ ಆ್ಯಶಸ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಸಮತೋಲನದಿಂದ ಕೂಡಿದ ತಂಡವನ್ನು ಪ್ರಕಟಿಸಲಾಗಿದೆ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡ ಆಡಿದ 19 ಏಕದಿನ ಪಂದ್ಯಗಳಲ್ಲಿ 17ರಲ್ಲಿ ಸೋತು ಮುಖಭಂಗ ಅನುಭವಿಸಿದೆ. ಕಳೆದ ತಿಂಗಳಷ್ಟೇ ಯುಎಇನಲ್ಲಿ ಜರುಗಿದ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ 3-0 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿದೆ. ಇದೀಗ ಬಲಿಷ್ಠ ಭಾರತ ತಂಡವನ್ನು ಎದುರಿಸಲು ಫಿಂಚ್ ಪಡೆ ಸಜ್ಜಾಗಿದೆ.
ಭಾರತ ತಂಡವು ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನವೆಂಬರ್ 21ರಂದು ಬ್ರಿಸ್ಬೇನ್’ನಲ್ಲಿ ನಡೆಯುವ ಮೊದಲ ಟಿ20 ಕದನದಲ್ಲಿ ಭಾರತ ತಂಡವು ಕಾಂಗರು ಪಡೆಯನ್ನು ಎದುರಿಸಲಿದೆ.
