ಕೊಲಂಬೊ(ಆ.01): 4 ವರ್ಷಗಳ ಬಳಿಕ ಶ್ರೀಲಂಕಾ ತವರಿನಲ್ಲಿ ಏಕದಿನ ಸರಣಿ ಜಯಿಸಿದೆ. ಬಾಂಗ್ಲಾದೇಶ ವಿರುದ್ಧ ಬುಧವಾರ ಇಲ್ಲಿ ನಡೆದ 3ನೇ ಪಂದ್ಯದಲ್ಲಿ ಲಂಕಾ 122 ರನ್‌ಗಳಿಂದ ಗೆದ್ದು 3-0ಯಲ್ಲಿ ಸರಣಿ ವಶಪಡಿಸಿಕೊಂಡಿತು.

ವಿದಾಯದ ಪಂದ್ಯದಲ್ಲಿ ದಾಖಲೆ ಬರೆದ ಮಾಲಿಂಗ

ಮೊದಲು ಬ್ಯಾಟ್‌ ಮಾಡಿದ ಲಂಕಾ 8 ವಿಕೆಟ್‌ಗೆ 294 ರನ್‌ ಗಳಿಸಿತು. ಏಂಜಲೋ ಮ್ಯಾಥ್ಯೂಸ್ 87, ಕುಸಾಲ್ ಮೆಂಡೀಸ್ 54 ಬಾರಿಸುವ ಮೂಲಕ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡ್ಯೊಯ್ದರು. ಇನ್ನು ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶಕ್ಕೆ ದಶುನ್ ಸನಕಾ, ಕುಸಾನ ರಂಜಿತಾ, ಲಹಿರೂ ಕುಮಾರ ಆಘಾತ ನೀಡಿದರು. ಬಾಂಗ್ಲಾ 172 ರನ್‌ಗೆ ಆಲೌಟ್‌ ಆಯಿತು.

ಬಾಂಗ್ಲಾ ವಿರುದ್ಧ ಲಂಕಾಕ್ಕೆ ಸರಣಿ ಜಯ

ಬಾಂಗ್ಲಾದೇಶ ಪರ ಸೌಮ್ಯ ಸರ್ಕಾರ್ 69, ತೈಜುಲ್ ಇಸ್ಲಾಮ್ 39 ಹೊರತುಪಡಿಸಿ ಉಳಿದ್ಯಾವ ಆಟಗಾರರು ಲಂಕಾ ಬೌಲರ್‌ಗಳಿಗೆ ಪ್ರತಿರೋಧ ನೀಡಲಿಲ್ಲ. ಇದರೊಂದಿಗೆ ತವರಿನಲ್ಲಿ ಲಂಕಾ ಸರಣಿ ಕೈವಶ ಮಾಡಿಕೊಂಡಿತು.

ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ದಿಢೀರ್ ನಿವೃತ್ತಿ ಘೋಷಿಸಿದ ಲಂಕಾ ವೇಗಿ

ಮೊದಲ ಪಂದ್ಯದ ಗೆಲುವನ್ನು ಲಸಿತ್ ಮಾಲಿಂಗಾಗೆ ಅರ್ಪಿಸಿದ್ದ ಶ್ರೀಲಂಕಾ, ಅಂತಿಮ ಪಂದ್ಯವನ್ನು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ನುವಾನ್ ಕುಲಸೇಖರಗೆ ಅರ್ಪಿಸಿತು.

ಸ್ಕೋರ್‌: ಲಂಕಾ 294/8

ಬಾಂಗ್ಲಾ 172/10