ದೀಮುತ್ ಕರುಣರತ್ನೆ ನೇತೃತ್ವದ ಶ್ರೀಲಂಕಾ ತಂಡವು ಬರೋಬ್ಬರಿ 44 ತಿಂಗಳುಗಳ ಬಳಿಕ ತವರಿನಲ್ಲಿ ಸರಣಿ ಜಯಿಸಿ ಸಂಭ್ರಮಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಕೊಲಂಬೊ(ಜು.29): ಆರಂಭಿಕ ಆವಿಷ್ಕಾ ಫರ್ನಾಂಡೋ (82 ರನ್‌, 75 ಎಸೆತ) ಅದ್ಭುತ ಪ್ರದರ್ಶನದ ನೆರವಿನಿಂದ ಶ್ರೀಲಂಕಾ, ಬಾಂಗ್ಲಾದೇಶ ವಿರುದ್ಧ ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ 2-0 ಯಿಂದ ಸರಣಿ ಜಯಿಸಿದೆ. ಬುಧವಾರ (ಜು.31) 3ನೇ ಪಂದ್ಯ ನಡೆಯಲಿದೆ. ಈ ಸರಣಿ ಗೆಲುವಿನೊಂದಿಗೆ ಬರೋಬ್ಬರಿ 44 ತಿಂಗಳುಗಳ ಬಳಿಕ ಶ್ರೀಲಂಕಾ ತಂಡವು ತವರಿನಲ್ಲಿ ಸರಣಿ ಜಯ ದಾಖಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದಾಯದ ಪಂದ್ಯದಲ್ಲಿ ದಾಖಲೆ ಬರೆದ ಮಾಲಿಂಗ

ಭಾನುವಾರ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ ಮುಷ್ಫೀಕುರ್‌ ರಹೀಂ (98*) ಹಾಗೂ ಮೆಹದಿ ಹಸನ್‌ (43) ರನ್‌ ನಿಂದಾಗಿ 50 ಓವರಲ್ಲಿ 8 ವಿಕೆಟ್‌ಗೆ 238 ರನ್‌ ಗಳಿಸಿತು. ಈ ಸವಾಲಿನ ಗುರಿ ಬೆನ್ನತ್ತಿದ ಶ್ರೀಲಂಕಾ 44.4 ಓವರಲ್ಲಿ 3 ವಿಕೆಟ್‌ಗೆ 242 ರನ್‌ ಗಳಿಸಿ ಜಯ ಸಾಧಿಸಿತು.

ಮೊದಲ ಪಂದ್ಯವನ್ನು 91 ರನ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಲಸಿತ್ ಮಾಲಿಂಗಾಗೆ ಗೆಲುವಿನ ವಿದಾಯ ನೀಡಿದ್ದ ಶ್ರೀಲಂಕಾ, ಇನ್ನೊಂದು ಪಂದ್ಯವನ್ನು ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ.

ಸ್ಕೋರ್‌: ಬಾಂಗ್ಲಾ 238/8 

ಶ್ರೀಲಂಕಾ 242/3