ಲಂಡನ್(ಜೂ.14): ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ನಟ, ಕಿಚ್ಚ ಸುದೀಪ್ ನೇತೃತ್ವದ ವಿಷನೇರ್ ತಂಡ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.  12 ತಂಡಗಳನ್ನೊಳಗೊಂಡಿರುವ ಕಾರ್ಪೋರೇಟ್ ಲೀಗ್ ಟೂರ್ನಿಯಲ್ಲಿ ಸುದೀಪ್ ನಾಯಕತ್ವದ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

 

ಇದನ್ನೂ ಓದಿ: ವಿಶ್ವಕಪ್ ಟೂರ್ನಿ ಭಾರತಕ್ಕೆ ವರ್ಗಾಯಿಸಲು ಅಮಿತಾಬ್ ಬಚ್ಚನ್ ಆಗ್ರಹ!

ಗೆಲುವಿನ ಸಂತಸವನ್ನು ಕಿಚ್ಚ ಸುದೀಪ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರಬಲ ಪೈಪೋಟಿಯಿಂದ ಕೂಡಿದ ಟೂರ್ನಿಯಲ್ಲಿ ವಿಷನೇರ್ ತಂಡ ಚಾಂಪಿಯನ್ ಆಗಿದೆ. ಅದ್ದೂರಿ ಸ್ವಾಗತ, ಅತ್ಯುತ್ತಮ ಸತ್ಕಾರ ನೀಡಿದ ಲಾರ್ಡ್ಸ್ ಆಡಳಿತ ಮಂಡಳಿಗೆ ಧನ್ಯವಾದ. ಕಳೆದ ಬಾರಿ ತಂಡದಲ್ಲಿದ್ದು, ಈ ಬಾರಿ ಅಗಲಿರುವ ನಟ ಧ್ರುವನಿಗೆ ಈ ಟ್ರೋಫಿ ಅರ್ಪಿಸುವುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ.