ಮೊದಲ ಪಂದ್ಯದಲ್ಲಿ ಚೆನ್ನೈ ಸಿಟಿ ಹಾಗೂ ಮಿನರ್ವ ಯಾವುದೇ ಗೋಲು ದಾಖಲಿಸಲು ವಿಫಲವಾಗಿ 0-0ಯಿಂದ ಡ್ರಾ ಕಂಡಿದ್ದವಲ್ಲದೆ, ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು.
ಬೆಂಗಳೂರು(ಜ.13): ಈ ಋತುವಿನ ಐ-ಲೀಗ್ ಫುಟ್ಬಾಲ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್'ಸಿ) ಇದೀಗ ತವರಿನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿಯೂ ಜಯದ ಗುರಿ ಹೊತ್ತಿದೆ.
ಸ್ಟಾರ್ ಆಟಗಾರ ಸುನೀಲ್ ಛೆಟ್ರಿ ಸಾರಥ್ಯದ ಹಾಲಿ ಚಾಂಪಿಯನ್ ಬಿಎಫ್‌ಸಿ, ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜ.7 ರಂದು ನಡೆದಿದ್ದ ಮೊದಲ ಪಂದ್ಯದಲ್ಲಿ ಪ್ರವಾಸಿ ಶಿಲ್ಲಾಂಗ್ ಲಜಾಂಗ್ ವಿರುದ್ಧ 3-0 ಗೋಲುಗಳಿಂದ ವಿಜೃಂಭಿಸಿತ್ತು. ಯುವ ಆಟಗಾರ ಉದಾಂತ ಸಿಂಗ್ ಎರಡು ಗೋಲು ಬಾರಿಸಿ ತಂಡಕ್ಕೆ ಸೊಗಸಾದ ಜಯ ತಂದಿತ್ತಿದ್ದರು.
ಸದ್ಯ ಶನಿವಾರ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ಸಿಟಿ ತಂಡವನ್ನು ಎದುರುಗೊಳ್ಳುತ್ತಿರುವ ಬಿಎಫ್‌ಸಿ, ಮೊದಲ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟಿರುವ ಪ್ರವಾಸಿ ತಂಡಕ್ಕೆ ಸೋಲಿನ ರುಚಿಯುಣಿಸಲು ತಂತ್ರ ಹೆಣೆದಿದ್ದರೆ, ಇತ್ತ ಚೆನ್ನೈ ಸಿಟಿ ಮೊದಲ ಗೆಲುವಿನ ಗುರಿ ಹೊತ್ತಿದೆ.
ಅಂದಹಾಗೆ ಮೊದಲ ಪಂದ್ಯದಲ್ಲಿ ಚೆನ್ನೈ ಸಿಟಿ ಹಾಗೂ ಮಿನರ್ವ ಯಾವುದೇ ಗೋಲು ದಾಖಲಿಸಲು ವಿಫಲವಾಗಿ 0-0ಯಿಂದ ಡ್ರಾ ಕಂಡಿದ್ದವಲ್ಲದೆ, ತಲಾ ಒಂದೊಂದು ಅಂಕ ಹಂಚಿಕೊಂಡಿದ್ದವು.
