ಕಾಂಡೋಂಗಾಗಿ ಜಗಳ: ಸರ್ಕಾರಿ ನೌಕರನಿಗೆ ಬಿತ್ತು ಗೂಸಾ!

First Published 23, Mar 2018, 9:17 AM IST
Condom Clash Take Place In Chikkaballapura
Highlights

ಪೆರೇಸಂದ್ರದ ಸರ್ಕಾರಿ ಆಸ್ಪತ್ರೆಗೆ ಬಂದ ಸರ್ಕಾರಿ ನೌಕರ, ಶುಶ್ರೂಷಕಿಯನ್ನು ಕಾಂಡೋಂ ನೀಡುವಂತೆ ಕೇಳಿದ್ದಾನೆ. ಅದಕ್ಕೆ ಅವರು ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿ ಕಾಂಡೋಮ್‌ಗಳಿದ್ದು, ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಚಿಕ್ಕಬಳ್ಳಾಪುರ(ಮಾ.23): ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಶುಶ್ರೂಷಕಿಯ ಬಳಿ ಸರ್ಕಾರಿ ನೌಕರನೊಬ್ಬ ಕಾಂಡೋಮ್‌ ಕೇಳಿ ಗೂಸಾ ತಿಂದಿರುವ ಘಟನೆ ತಾಲೂಕಿನ ಪೆರೇಸಂದ್ರ ಆಸ್ಪತ್ರೆಯಲ್ಲಿ ತಡವಾಗಿ ನಡೆದಿದೆ.

ಪೆರೇಸಂದ್ರದ ಸರ್ಕಾರಿ ಆಸ್ಪತ್ರೆಗೆ ಬಂದ ಸರ್ಕಾರಿ ನೌಕರ, ಶುಶ್ರೂಷಕಿಯನ್ನು ಕಾಂಡೋಂ ನೀಡುವಂತೆ ಕೇಳಿದ್ದಾನೆ. ಅದಕ್ಕೆ ಅವರು ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿ ಕಾಂಡೋಮ್‌ಗಳಿದ್ದು, ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಇದಕ್ಕೆ ಒಪ್ಪದ ಆರೋಪಿ, ನೀವೇ ತೆಗೆದುಕೊಡಿ ಎಂದು ಕುಡಿದ ಅಮಲಿನಲ್ಲಿ ಜಗಳವಾಡಿದ್ದಾನೆ. ಇದರಿಂದ ಗಾಬರಿಗೊಂಡ ಶುಶ್ರೂಷಕಿ ತನ್ನ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಬಂದ ಪತಿ, ಆರೋಪಿಗೆ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಗ್ರಾಮಸ್ಥರು ಮಧ್ಯಪ್ರವೇಶಿಸಿ ರಾಜೀ-ಸಂಧಾನ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.

loader