Commonwealth Games 2022: ನಡಿಗೆಯಲ್ಲಿ ಪ್ರಿಯಾಂಕಾ, ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ಗೆ ಬೆಳ್ಳಿ!
ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ ಮುಂದಿವರಿದಿದೆ. ಶುಕ್ರವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಕುಸ್ತಿಯಲ್ಲಿ ದೀಪಕ್ ಪೂನಿಯಾ ಸ್ವರ್ಣ ಸಾಧನೆ ಮಾಡಿದ್ದರೆ, ದಿವ್ಯಾ ಕ್ಯಾಕ್ರನ್ ಹಾಗೂ ಮೋಹಿತ್ ಗ್ರೇವಾಲ್ ಕಂಚಿನ ಪದಕ ಜಯಿಸಿದ್ದರು. ಶನಿವಾರದ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಮಹಿಳೆಯರ 10 ಸಾವಿರ ಮೀಟರ್ ನಡಿಗೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ ಹಾಗೂ ಪುರುಷರ 3 ಸಾವಿರ ಮೀಟರ್ ಸ್ಟೀಪಲ್ ಚೇಸ್‌ನಲ್ಲಿ ಅವಿನಾಶ್ ಸಬ್ಲೆ ಬೆಳ್ಳಿ ಪದಕ ಗೆದ್ದಿದ್ದಾರೆ.
ಬರ್ಮಿಂಗ್‌ಹ್ಯಾಂ (ಆ.6): ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದೆ. ಶನಿವಾರ ನಡೆದ ಅಥ್ಲೆಟಿಕ್ಸ್ ವಿಭಾಗದ ಮಹಿಳೆಯರ 10 ಸಾವಿರ ಮೀಟರ್ ನಡಿಗೆಯಲ್ಲಿ ಪ್ರಿಯಾಂಕ ಗೋಸ್ವಾಮಿ ಹಾಗು ಪುರುಷರ 3 ಸಾವಿರ ಮೀಟರ್ ಸ್ಟೋಪಕ್ ಚೇಸ್ ಸ್ಪರ್ಧೆಯಲ್ಲಿ ಅವಿನಾಶ್ ಮುಕುಂದ್ ಸಬ್ಲೆ ಬೆಳ್ಳಿ ಪದಕ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ಈವರೆಗೂ ನಾಲ್ಕು ಪದಕಗಳನ್ನು ಗೆದ್ದಂತಾಗಿದೆ ಇದಕ್ಕೂ ಮುನ್ನ ತೇಜಸ್ವಿನ್ ಶಂಕರ್ ಹಾಗೂ ಮುರಳಿ ಶ್ರೀಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ತಲಾ ಕಂಚಿನ ಪದಕ ಹಾಗೂ ಬೆಳ್ಳಿ ಪದಕ ಜಯಿಸಿದ್ದರು. ಉತ್ತರ ಪ್ರದೇಶದ ಪ್ರಿಯಾಂಕಾ ಗೋಸ್ವಾಮಿ ಮಮಹಿಳೆಯ 10 ಸಾವಿರ ಮಿಟರ್ ನಡಿಗೆಯ ಫೈನಲ್‌ನಲ್ಲಿ ಬಳ್ಲಿ ಪದಕ ಜಯಿಸಿದರು. ತಮ್ಮ ಜೀವಶ್ರೇಷ್ಠ ಟೈಮಿಂಗ್ 43 ನಿಮಿಷ38.83 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆ ಮಾಡಿದ್ದರು. ಕಳೆದ ವರ್ಷ ನಡೆದ ಟೋಕಿಯೋ ಒಲಿಂಪಿಕ್ಸ್ ಕೂಟದಲ್ಲಿ 58 ಸ್ಪರ್ಧಿಗಳ ನಡುವೆ ಓಡಿದ್ದ ಪ್ರಿಯಾಂಕಾ ಗೋಸ್ವಾಮಿ 1 ಗಂಟೆ 32.36 ನಿಮಿಷದಲ್ಲಿ ಗುರಿ ತಲುಪಿದ್ದರು. ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ 42.34 ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಜಯಿಸಿದರೆ, ಕೀನ್ಯಾದ ಎಮಲಿ ವಾಮುಸ್ಯಿ ನಿಗಿ 43.50 ನಿಮಿಷದಲ್ಲಿ ಗುರಿ ಮುಟ್ಟಿ ಕಂಚಿನ ಪದಕ ಜಯಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದ ಭಾವನಾ ಜಾಟ್ 47.14 ನಿಮಿಷದಲ್ಲಿ ಗುರಿ ಮುಟ್ಟಿ 8ನೇ ಸ್ಥಾನ ಪಡೆದರು.
ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್‌ಗೆ ಬೆಳ್ಳಿ: ಪುರುಷರ 3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಅವಿನಾಶ್ ಸಬ್ಲೆ ಬೆಳ್ಳಿ ಗೆದ್ದರು. 8 ನಿಮಿಷ 11.20 ನಿಮಿಷದಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಜಯಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯೊಂದಿಗೆ ರಾಷ್ಟ್ರೀಯ ದಾಖಲೆಯೂ ಆಗಿದೆ. ಕೀನ್ಯಾದ ಅಬ್ರಹಾಂ ಕಿಬಿವೊಟ್ 8 ನಿಮಿಷ 11.15 ಸೆಕೆಂಡ್‌ಲ್ಲಿ ಗುರಿ ಮುಟ್ಟಿ ಚಿನ್ನ ಜಯಿಸಿದರೆ, ಕೀನ್ಯಾದ ಅಮೋಸ್ ಸೆರಮ್ 8 ನಿಮಿಷ 16.83 ಸೆಕೆಂಡ್‌ನಲ್ಲಿ ಗುರಿ ಮುಟ್ಟಿ ಮೂರನೇ ಸ್ಥಾನ ಪಡೆದರು.
ಇತ್ತೀಚೆಗೆ ಅಮೆರಿಕದ ಒರೆಗಾನ್‌ನ ಯುಗ್ಯೂನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 3 ಸಾವಿರ ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ 11ನೇ ಸ್ಥಾನ ಪಡೆದಿದ್ದರು. 27 ವರ್ಷದ ಸಬ್ಲೆ ಆ ಕೂಟದಲ್ಲಿ 8 ನಿಮಿಷ 31.75 ಸೆಕೆಂಡ್‌ನಲ್ಲಿ ಗುರಿ ಕ್ರಮಿಸಿದ್ದರು. ಇದು ಅವರ ಜೀವನಶ್ರೇಷ್ಠ ಟೈಮಿಂಗ್ ಆಗಿದ್ದ 8 ನಿಮಿಷ 12.48 ಸೆಕೆಂಡ್‌ಗಿಂತ ಕಡಿಮೆ ಎನಿಸಿತ್ತು. ಇದು ಈ ಹಿಂದೆ ಅವರ ರಾಷ್ಟ್ರೀಯ ದಾಖಲೆಯೂ ಆಗಿತ್ತು.
Commonwealth Games 2022: ಭಜರಂಗ್ ಪೂನಿಯಾಗೆ ಸ್ವರ್ಣ, ಜನ್ಮದಿನದಂದೇ ಬೆಳ್ಳಿ ಗೆದ್ದ ಅನ್ಶು ಮಲೀಕ್!
ಬಾಕ್ಸಿಂಗ್‌ನಲ್ಲಿ ಅಮಿತ್, ನೀತುಗೆ ಗೆಲುವು: ಪುರುಷರ 51 ಕೆಜಿ ಬಾಕ್ಸಿಂಗ್‌ನಲ್ಲಿ ಅಮಿತ್ ಪಂಗಲ್ ಅವರು ಜಾಂಬಿಯಾದ ಪ್ಯಾಟ್ರಿಕ್ ಚೈನಾಂಬಾ ಅವರನ್ನು 5-0 ಅಂತರದಿಂದ ಸೋಲಿಸಿದರು. ಈ ಮೂಲಕ ಫೈನಲ್‌ಗೆ ಲಗ್ಗೆ ಇಡುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ. ಅದೇ ಸಮಯದಲ್ಲಿ, 48 ಕೆಜಿ ತೂಕದ ಬಾಕ್ಸಿಂಗ್‌ನಲ್ಲಿ ಕೆನಡಾದ ಪ್ರಿಯಾಂಕಾ ಧಿಲ್ಲೋನ್ ವಿರುದ್ಧ ಸೆಮಿಫೈನಲ್‌ನಲ್ಲಿ ನೀತು ಗೆದ್ದಿದ್ದಾರೆ. ನೀತು ಅವರು ಕೆನಡಾದ ಬಾಕ್ಸರ್ ಅವರನ್ನು 5-0 ಅಂತರದಿಂದ ಸೋಲಿಸಿದ್ದಾರೆ. ಇನ್ನು ಟೇಬಲ್ ಟೆನಿಸ್ ವಿಭಾಗದಲ್ಲಿ ಭಾರತದ ಶರತ್ ಕಮಲ್ 4-0ಯಿಂದ ಸಿಂಗಾಪುರದ ಯಂಗ್ ಐಸಾಕ್ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್‌ಗೇರಿದರು.
Commonwealth games 2022- ಭಾರತೀಯ ಸ್ವರ್ಧಿಗಳು ಪದಕಗಳನ್ನು ಗೆದ್ದ ಕ್ಷಣಗಳು
ಭಾರತಕ್ಕೆ 6ನೆ ಸ್ಥಾನ: ಈವರೆಗೂ ಭಾರತ ತಂಡ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 9 ಚಿನ್ನ, 10 ಬೆಳ್ಳಿ, 9 ಕಂಚಿನೊಂದಿಗೆ ಒಟ್ಟು 28 ಪದಕ ಗೆದ್ದಿದ್ದು, ಪದಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. 54 ಚಿನ್ನದೊಂದಿಗೆ ಒಟ್ಟು 145 ಪದಕ ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, 47 ಚಿನ್ನ ಗೆದ್ದಿರುವ ಇಂಗ್ಲೆಂಡ್ 2ನೇ ಸ್ಥಾನದಲ್ಲಿದೆ.