ಆಸ್ಟ್ರೇಲಿಯಾದ ಗೋಲ್ದ್'ಕೋಸ್ಸ್ 21ನೇ ಕಾಮನ್‌ವೆಲ್ತ್ ಗೇಮ್ಸ್ಮಧ್ಯಾಹ್ನ 3.15ಕ್ಕೆ ಅದ್ಧೂರಿ ಉದ್ಘಾಟನಾ ಸಮಾರಂಭ71 ರಾಷ್ಟ್ರಗಳಿಂದ ಪಥ ಸಂಚಲನ ,ಸಿಂಧು ಭಾರತದ ಧ್ವಜಗಾರ್ತಿಮೈನವಿರೇಳಿಸಲಿರುವ ಮನರಂಜನಾ ಕಾರ್ಯಕ್ರಮ

ಗೋಲ್ಡ್'ಕೋಸ್ಟ್(ಏ.04): ಬಹುನಿರೀಕ್ಷಿತ 21ನೇ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್ ಕ್ರೀಡಾಕೂಟದ ಆತಿಥ್ಯಕ್ಕೆ ಸಜ್ಜಾಗಿದ್ದು, ಬುಧವಾರ ಅದ್ಧೂರಿ ಉದ್ಧಾಟನಾ ಕಾರ್ಯಕ್ರಮ ಜರುಗಲಿದೆ. ಇಲ್ಲಿನ ಕರ್ರಾ ಕ್ರೀಡಾಂಗಣ ಉದ್ಘಾಟನಾ ಸಮಾರಂಭಕ್ಕೆ ವೇದಿಕೆಯಾಗಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್, ವೇಲ್ಸ್ ರಾಜಕುಮಾರ ಪ್ರಿನ್ಸ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಕ್ರೀಡಾಂಗಣ 35000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದು, ಭರ್ತಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಭಾರತೀಯ ಕಾಲಮಾನ ಮಧ್ಯಾಹ್ನ 3.15ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದ್ದು, ಸತತ 3 ಗಂಟೆಗಳ ಕಾಲ ನಡೆಯಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲಾ 71 ರಾಷ್ಟ್ರಗಳ ಕ್ರೀಡಾಪಟುಗಳು ಪಥಸಂಚಲನ ನಡೆಸಲಿದ್ದು, ತಾರಾ ಶಟ್ಲರ್ ಪಿ.ವಿ.ಸಿಂಧು ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ.

ಕ್ರೀಡಾಂಗಣದ ಒಳಗೇ ಬೀಚ್!

ಆಸ್ಟ್ರೇಲಿಯಾದ ಕರಾವಳಿ ನಗರವಾಗಿರುವ ಗೋಲ್ಡ್ ಕೋಸ್ಟ್ ತನ್ನ ಸುಂದರ ಬೀಚ್‌ಗಳಿಗೆ ಜಗತ್ಪ್ರಸಿದ್ಧಿ ಪಡೆದಿದೆ. ಗೋಲ್ಡ್‌ಕೋಸ್ಟ್ ಸರ್ಫರ್‌ಗಳ ತವರೂರು ಎಂದೇ ಕರೆಸಿಕೊಳ್ಳುವ ಕಾರಣ, ಉದ್ಘಾಟನಾ ಸಮಾರಂಭದಲ್ಲೂ ಸ್ಥಳೀಯ

ಕಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕ್ರೀಡಾಂಗಣದ ಮಧ್ಯಭಾಗದಲ್ಲಿ ಕೃತಕ ಬೀಚ್ ಸ್ಥಾಪಿಸಲಾಗಿದ್ದು, ಜೀವ ರಕ್ಷಕರು ಹಾಗೂ ಬಂಗಾರ್ರ ಎನ್ನುವ ಮೂಲ ನಿವಾಸಿಗಳ ತಂಡ ಪ್ರದರ್ಶನ ನೀಡಲಿದೆ.

ಎಲ್ಲಾ 71 ತಂಡಗಳನ್ನು ಗುಲಾಬಿ ಸರ್ಫಿಂಗ್ ಬೋರ್ಡ್‌ಗಳನ್ನು ಹಿಡಿದ ಯುವಕ/ಯುವತಿಯರು ಕ್ರೀಡಾಂಗಣಕ್ಕೆ ಮುನ್ನಡೆಸಲಿ

ದ್ದಾರೆ. ಸ್ಥಳೀಯ ಕಲೆ, ಸಂಸ್ಕೃತಿಕ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಜತೆಗೆ ಆಸ್ಟ್ರೇಲಿಯಾದ ಪ್ರಸಿದ್ಧ ಗಾಯಕರು, ಬ್ಯಾಲೆ ನೃತ್ಯಗಾರ್ತಿಯರು ಪ್ರೇಕ್ಷಕರ ಮನರಂಜಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.

150 ಕೋಟಿ ಜನರಿಂದ ವೀಕ್ಷಣೆ ನಿರೀಕ್ಷೆ!

ವಿಶ್ವಾದ್ಯಂತ ಕಾಮನ್'ವೆಲ್ತ್ ಕ್ರೀಡಾಕೂಟ ಪ್ರಸಾರಗೊಳ್ಳಲಿದ್ದು, ಟೀವಿಯಲ್ಲಿ ಬರೋಬ್ಬರಿ 150 ಕೋಟಿ ಜನರು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಕ್ರೀಡಾಕೂಟದ ಆಯೋಜನೆಗಾಗಿ 2511 ದಿನಗಳ ಕಾಲ ಶ್ರಮಿಸಿರುವ ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ, ಅತ್ಯಂತ ಯಶಸ್ವಿಯಾಗಿ ನಡೆಸುವ ವಿಶ್ವಾಸ ಹೊಂದಿದೆ ಎಂದು ಸ್ಥಳೀಯ ಕ್ರೀಡಾ ಸಚಿವೆ ಕೇಟ್ ಜೋನ್ಸ್ ಹೇಳಿದ್ದಾರೆ.

ಒಂದು ಪಂದ್ಯ ಗೆದ್ದರೆ ಸಾಕು ಮೇರಿ ಕೋಮ್‌ಗೆ ಪದಕ!

ಭಾರತದ ಪದಕ ಭರವಸೆಗಳಲ್ಲಿ ಒಬ್ಬರೆನಿಸಿರುವ ಬಾಕ್ಸರ್ ಮೇರಿ ಕೋಮ್, ಒಂದು ಪಂದ್ಯ ಗೆದ್ದರೆ ಸಾಕು ಪದಕ ಖಚಿತವಾಗಲಿದೆ. ೪೮ ಕೆಜಿ ವಿಭಾಗದಲ್ಲಿ ಕೇವಲ 8 ಬಾಕ್ಸರ್‌ಗಳು ಮಾತ್ರ ಇದ್ದು, ಎಲ್ಲರಿಗೂ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶ ದೊರೆತಿದೆ. ಬಾಕ್ಸಿಂಗ್‌ನಲ್ಲಿ ಸೆಮೀಸ್‌ಗೇರಿದರೆ, ಕಂಚಿನ ಪದಕ ಖಚಿತವಾಗಲಿದೆ. ಇದೇ ರೀತಿ, +91 ಕೆಜಿ ವಿಭಾಗದಲ್ಲಿ ಸತೀಶ್ ಕುಮಾರ್, 51 ಕೆಜಿ ವಿಭಾಗದಲ್ಲಿ ಪಿಂಕಿ ಜಾಂಗ್ರಾ, 69 ಕೆಜಿ ವಿಭಾಗದಲ್ಲಿ ಲವ್ಲಿನಾ ಸಹ ನೇರವಾಗಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ.

ಕೂಟದಲ್ಲಿ ರಾಜ್ಯದ 11 ಕ್ರೀಡಾಪಟುಗಳು

ಗೋಲ್ಡ್'ಕೋಸ್ಟ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇಬ್ಬರು ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಕರ್ನಾಟಕದ 11 ಕ್ರೀಡಾಪಟು ಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರ ವಿವರ ಇಲ್ಲಿದೆ.

ಅಥ್ಲೆಟಿಕ್ಸ್- ಜೀವನ್ ಕಾರೆಕೊಪ್ಪ , ಎಂ.ಆರ್. ಪೂವಮ್ಮ. ಬ್ಯಾಡ್ಮಿಂಟನ್- ಅಶ್ವಿನಿ ಪೊನ್ನಪ್ಪ. ಬಾಸ್ಕೆಟ್‌ಬಾಲ್- ನವನೀತ,

ಬಾಂಧವ್ಯ. ಹಾಕಿ- ಎಸ್.ವಿ. ಸುನೀಲ್, ಸೂರಜ್ ಕರ್ಕೆರಾ. ಈಜು- ಶ್ರೀಹರಿ ನಟರಾಜು. ವೇಟ್ ಲಿಫ್ಟಿಂಗ್- ಗುರುರಾಜ.

ಪ್ಯಾರಾ ಪವರ್ ಲಿಫ್ಟಿಂಗ್- ಫರ್ಮಾನ್ ಬಾಷ, ಸಕಿನಾ.