ನಿವೃತ್ತಿ ಹಾಗೂ ಭವಿಷ್ಯದ ಬಗ್ಗೆ ಮಾತನಾಡಿದ ಯುವಿ

First Published 14, Feb 2018, 5:54 PM IST
Coaching is in my mind post retirement Yuvraj Singh
Highlights

ತಮ್ಮಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದ್ದು, ಕನಿಷ್ಠ 2ರಿಂದ 3ವರ್ಷ ಐಪಿಎಲ್‌ನಲ್ಲಾದರೂ ಮುಂದುವರಿಯಲಿದ್ದೇನೆ

ನವದೆಹಲಿ(ಫೆ.14): ಭಾರತ ತಂಡದ ಹಿರಿಯ ಬ್ಯಾಟ್ಸ್'ಮನ್ ಯುವರಾಜ್ ಸಿಂಗ್ ನಿವೃತ್ತಿ ಬಳಿಕ ತಮ್ಮ ಯೋಜನೆ ಏನು ಎನ್ನುವುದನ್ನು ಬಹಿರಂಗಗೊಳಿಸಿದ್ದಾರೆ.

‘ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುವುದು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ, ಕೋಚ್ ಆಗುವತ್ತ ಗಮನ ಹರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಆದರೆ ಯುವರಾಜ್ ಶೀಘ್ರದಲ್ಲೇ ಕ್ರಿಕೆಟ್‌ಗೆ ವಿದಾಯ ಘೋಷಿಸಲಿದ್ದಾರೆ ಎನ್ನುವ ವದಂತಿಯನ್ನು ಅವರು ತಳ್ಳಿಹಾಕಿದ್ದಾರೆ. 36 ವರ್ಷದ ಯುವರಾಜ್, ತಮ್ಮಲ್ಲಿ ಇನ್ನೂ ಕ್ರಿಕೆಟ್ ಬಾಕಿ ಇದ್ದು, ಕನಿಷ್ಠ 2ರಿಂದ 3ವರ್ಷ ಐಪಿಎಲ್‌ನಲ್ಲಾದರೂ ಮುಂದುವರಿಯಲಿದ್ದೇನೆ ಎಂದು ತಿಳಿಸಿದ್ದಾರೆ

loader