ಸದ್ಯದ ಪರಿಸ್ಥಿತಿಯಲ್ಲಿ ಪೈಸೆ ಪೈಸೆಗೂ ಲೆಕ್ಕ ಹಾಕುವ ಸ್ಥಿತಿ ಇದೆ. ಇಂತಹದ್ದರಲ್ಲಿ ಓಲ್ಟಮನ್ಸ್ ಆಟಗಾರರ ಅಶಿಸ್ತಿಗೆ ದಂಡ ಹೇರುತ್ತಿದ್ದಾರೆ.

ಲಕ್ನೋ(ಡಿ.16): ಭಾರತ ಹಾಕಿ ತಂಡದ ಕೋಚ್ ರೋಲ್ಯಾಂಟ್ ಓಲ್ಟಮನ್ಸ್ ಅವರ ಅಭ್ಯಾಸ ಶಿಬಿರಕ್ಕೆ ಆಟಗಾರರು ತಡವಾಗಿ ಹೋದರೆ 500 ರೂಗಳ ದಂಡವನ್ನು ತೆರಬೇಕಾಗಿದೆ. ಆಟಗಾರರಲ್ಲಿ ಶಿಸ್ತನ್ನು ಮೂಡಿಸುವ ಸಲುವಾಗಿ ಓಲ್ಟಮನ್ಸ್ ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪೈಸೆ ಪೈಸೆಗೂ ಲೆಕ್ಕ ಹಾಕುವ ಸ್ಥಿತಿ ಇದೆ. ಇಂತಹದ್ದರಲ್ಲಿ ಓಲ್ಟಮನ್ಸ್ ಆಟಗಾರರ ಅಶಿಸ್ತಿಗೆ ದಂಡ ಹೇರುತ್ತಿದ್ದಾರೆ. ಇದು ಅಭ್ಯಾಸಕ್ಕೆ ಮಾತ್ರ ಸಿಮೀತವಾಗಿಲ್ಲ. ಹಾಕಿ ಆಟಗಾರರು ಭಾಗವಹಿಸುವ ಸಂಸ್ಥೆಯ ಕಾರ್ಯಕ್ರಮಗಳಲ್ಲೂ ಈ ಕ್ರಮ ಅನ್ವಯವಾಗುತ್ತಿದೆ.

ಓಲ್ಟಮನ್ಸ್ ಅವರ ಶಿಸ್ತುಬದ್ಧ ಕೋಚ್‌ನಿಂದಾಗಿ ಭಾರತ ಹಾಕಿ ತಂಡ ಸದ್ಯ ವಿಶ್ವ ಶ್ರೇಯಾಂಕದಲ್ಲಿ 6ನೇ ಸ್ಥಾನ ಪಡೆದಿದೆ.