Asianet Suvarna News Asianet Suvarna News

ಶಾಸ್ತ್ರಿ ಓಕೆ ಜಹೀರ್, ದ್ರಾವಿಡ್ ಯಾಕೆ? ಸಿಒಎ ಅಸಮಾಧಾನ

ಮುಖ್ಯ ಕೋಚ್ ರವಿಶಾಸ್ತ್ರಿ ಬೌಲಿಂಗ್ ಸಲಹೆಗಾರರನ್ನಾಗಿ ಭರತ್ ಅರುಣ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಇರಾದೆ ಹೊಂದಿದ್ದರು

COA disappointed at CAC decision to hire Rahul Dravid Zaheer Khan
  • Facebook
  • Twitter
  • Whatsapp

ನವದೆಹಲಿ(ಜು.13): ಕ್ರಿಕೆಟ್ ಸಲಹಾ ಸಮಿತಿ ಬ್ಯಾಟಿಂಗ್ ಸಲಹೆಗಾರನಾಗಿ ರಾಹುಲ್ ದ್ರಾವಿಡ್ ಹಾಗೂ ಬೌಲಿಂಗ್ ಕೋಚ್ ಆಗಿ ಜಹೀರ್ ಖಾನ್ ಅವರನ್ನು ನೇಮಕ ಮಾಡಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಬುಧವಾರವಷ್ಟೇ, ರವಿಶಾಸ್ತ್ರಿ ಅವರ ಆಯ್ಕೆಗೆ ಆಡಳಿತ ಸಮಿತಿ, ಸಲಹಾ ಸಮಿತಿಯನ್ನು ಶ್ಲಾಘಿಸಿತ್ತು.

‘ಪ್ರಧಾನ ಕೋಚ್ ಆಯ್ಕೆ ಮಾಡುವುದು ಸಲಹಾ ಸಮಿತಿಯ ಕೆಲಸವಾಗಿತ್ತು. ಆದರೆ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಪ್ರಧಾನ ಕೋಚ್‌'ಗೆ ನೀಡಬೇಕೇ ಹೊರತು, ಸಲಹಾ ಸಮಿತಿ ಈ ವಿಚಾರದಲ್ಲಿ ತೀರ್ಮಾನ ಕೈಗೊಂಡಿದ್ದು ತಪ್ಪು’ ಎಂದು ಆಡಳಿತ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈ ವಾರಾಂತ್ಯದಲ್ಲಿ ಸಭೆ ಕರೆದು ಚರ್ಚೆ ನಡೆಸುವ ಸಾಧ್ಯತೆ ಇದೆ.

ಮುಖ್ಯ ಕೋಚ್ ರವಿಶಾಸ್ತ್ರಿ ಬೌಲಿಂಗ್ ಸಲಹೆಗಾರರನ್ನಾಗಿ ಭರತ್ ಅರುಣ್ ಅವರನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಇರಾದೆ ಹೊಂದಿದ್ದರು. ಆದರೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಜಹೀರ್ ಖಾನ್ ಅವರನ್ನು ಆಯ್ಕೆ ಮಾಡಿದೆ.

Follow Us:
Download App:
  • android
  • ios