ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಫ್ರೆಂಚ್ ಓಪನ್‌'ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶ ಹಾಗೂ ರಾಜ್ಯದ ಗೌರವನ್ನು ಹೆಚ್ಚಿಸಿದ್ದರೆ ಎಂದು ಬೋಪಣ್ಣ ಸಾಧನೆಯನ್ನು ಶ್ಲಾಘಿಸಿದರು.
ಬೆಂಗಳೂರು(ಜೂ.13): ಇತ್ತೀಚೆಗೆ ಪ್ಯಾರೀಸ್'ನಲ್ಲಿ ಮುಕ್ತಾಯಗೊಂಡ ಫ್ರೆಂಚ್ ಓಪನ್ನ ಮಿಶ್ರ ಡಬಲ್ಸ್ನಲ್ಲಿ ಚಾಂಪಿಯನ್ ಆಗಿದ್ದ ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ ಕೃಷ್ಣದಲ್ಲಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಫ್ರೆಂಚ್ ಓಪನ್'ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶ ಹಾಗೂ ರಾಜ್ಯದ ಗೌರವನ್ನು ಹೆಚ್ಚಿಸಿದ್ದರೆ ಎಂದು ಬೋಪಣ್ಣ ಸಾಧನೆಯನ್ನು ಶ್ಲಾಘಿಸಿದರು. ಟೆನಿಸ್ ಎಂದರೆ ಶ್ರೀಮಂತರ ಆಟ ಎಂದೇ ಕರೆಯುತ್ತಾರೆ. ಆದರೆ, ಬೋಪಣ್ಣ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಆದಾಗ್ಯೂ ಟೆನಿಸ್'ನಲ್ಲಿ ಸಾಧನೆ ಮಾಡಿರುವುದು ಇತರರಿಗೆ ಮಾದರಿ ಎಂದ ಅವರು, ಬೋಪಣ್ಣಗೆ ರಾಜ್ಯ ಸರ್ಕಾರದ ವತಿಯಿಂದ 10 ಲಕ್ಷ ರುಪಾಯಿ ನಗದು ಬಹುಮಾನ ಘೋಷಿಸಿದರು.
ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಈ ವೇಳೆ ಉಪಸ್ಥಿತರಿದ್ದರು.
