ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಹಾಡು, ಬ್ಯಾನರ್, ಜೆರ್ಸಿ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ ಎಂದು ವಿನೀತ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು(ಜು.04): ಬಿಎಫ್'ಸಿ ಸ್ಟಾರ್ ಸ್ಟ್ರೈಕರ್ ಸಿ.ಕೆ.ವಿನೀತ್ ಬೆಂಗಳೂರು ಫುಟ್ಬಾಲ್ ಕ್ಲಬ್'ಗೆ ವಿದಾಯ ಹೇಳಿದ್ದಾರೆ.
ಯಶಸ್ವಿ ಮೂರು ವರ್ಷಗಳ ಬಳಿಕ ತಾವು ಕ್ಲಬ್ ತೊರೆಯುತ್ತಿರುವುದಾಗಿ ವಿನೀತ್ ತಿಳಿಸಿದ್ದಾರೆ. ಬಿಎಫ್'ಸಿ ತಂಡದ ಐ-ಲೀಗ್ ಹಾಗೂ ಫೆಡರೇಶನ್ ಕಪ್ ಗೆಲುವಿನಲ್ಲಿ ಕೇರಳ ಆಟಗಾರ ಪ್ರಮುಖ ಪಾತ್ರ ವಹಿಸಿದ್ದರು.
‘ತಂಡದೊಂದಿಗೆ ಕಳೆದ ಪ್ರತಿಯೊಂದು ಕ್ಷಣವೂ ರೋಚಕ. ಇಲ್ಲಿ ಕಳೆದ ದಿನಗಳು ನನ್ನ ಜೀವನ ಬದಲಿಸಿದೆ’ ಎಂದು ವಿನೀತ್ ಹೇಳಿದ್ದಾರೆ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಹಾಡು, ಬ್ಯಾನರ್, ಜೆರ್ಸಿ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ ಎಂದು ವಿನೀತ್ ಟ್ವೀಟ್ ಮಾಡಿದ್ದಾರೆ.
ಬಿಎಫ್‌ಸಿ, ಇಂಡಿಯನ್ ಸೂಪರ್ ಲೀಗ್'ಗೆ ಸೇರ್ಪಡೆಗೊಂಡ ಕಾರಣ ನಿಯಮದಂತೆ ಕೇವಲ ಇಬ್ಬರನ್ನು ಮಾತ್ರ ಉಳಿಸಿಕೊಂಡ ಉಳಿದವರನ್ನು ಕೈಬಿಡಬೇಕಿದೆ.
