ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದ್ದು, ಸೋಂಕು ಜ್ವರದಿಂದ ಬಳಲುತ್ತಿದ್ದ ನಾಯಕ ಫಾಪ್ ಡ್ಯು ಪ್ಲೆಸಿಸ್ ಹಾಗೂ ಅನುಭವಿ ವೇಗಿ ಡೇಲ್ ಸ್ಟೇನ್ ತಂಡಕ್ಕೆ ಮರಳಿದ್ದಾರೆ.

ಜೊಹಾನ್ಸ್'ಬರ್ಗ್(ಡಿ.23): ಭಾರತ ವಿರುದ್ಧ ಕೇಪ್'ಟೌನ್'ನಲ್ಲಿ ಜನವರಿ 5ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಸುಮಾರು ಎರಡು ವರ್ಷಗಳ ಬಳಿಕ ಆಲ್ರೌಂಡರ್ ಕ್ರಿಸ್ ಮೋರಿಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಬಲಿಷ್ಠ ತಂಡವನ್ನು ಪ್ರಕಟಿಸಲಾಗಿದ್ದು, ಸೋಂಕು ಜ್ವರದಿಂದ ಬಳಲುತ್ತಿದ್ದ ನಾಯಕ ಫಾಪ್ ಡ್ಯು ಪ್ಲೆಸಿಸ್ ಹಾಗೂ ಅನುಭವಿ ವೇಗಿ ಡೇಲ್ ಸ್ಟೇನ್ ತಂಡಕ್ಕೆ ಮರಳಿದ್ದಾರೆ. 2016ರಲ್ಲಿ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಸ್ಟೇನ್, ಮಾರ್ನೆ ಮಾರ್ಕೆಲ್ ಹಾಗೂ ಎಬಿ ಡಿವಿಲಿಯರ್ಸ್ ತಂಡದಿಂದ ದೂರ ಉಳಿದಿದ್ದರು.

ಇನ್ನು ಜಿಂಬಾಬ್ವೆ ವಿರುದ್ಧದ ಏಕೈಕ 4 ದಿನದ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಕ್ವಿಂಟನ್ ಡಿ ಕಾಕ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಹೀಗಿದೆ:

ಫಾಪ್ ಡು ಪ್ಲೆಸಿಸ್(ನಾಯಕ), ಹಾಶೀಂ ಆಮ್ಲಾ, ತೆಂಬಾ ಬವುಮಾ, ಕ್ವಿಂಟಾನ್ ಡಿ ಕಾಕ್, ಥೆಯುನಿಸ್ ಡಿ ಬ್ರಿಯಾನ್, ಎಬಿ ಡಿ ವಿಲಿಯರ್ಸ್, ಡೀನ್ ಎಲ್ಗಾರ್, ಕೇಶವ್ ಮಹರಾಜ್, ಆ್ಯಯ್ಡನ್ ಮರ್ಕ್ರಾನ್, ಮಾರ್ನೆ ಮಾರ್ಕೆಲ್, ಕ್ರಿಸ್ ಮೋರಿಸ್, ಆಂಡಿಲೇ ಫೆಲುಕ್ವಾವ್ಯೋ, ವೆರ್ನಾನ್ ಫಿಲಾಂಡರ್, ಕಗಿಸೋ ರಬಾಡ, ಡೇಲ್ ಸ್ಟೇನ್.