ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 9.60 ಕೋಟಿ ರುಪಾಯಿ ನೀಡಿ ಆಸ್ಟ್ರೇಲಿಯಾದ ಕ್ರಿಸ್ ಲಿನ್ ಅವರನ್ನು ಕೆಕೆಆರ್ ತಮ್ಮ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಈ ಸಾಲಿನ ಐಪಿಎಲ್‌'ನಲ್ಲಿ ಲಿನ್ ಆಡುವುದು ಅನುಮಾನವಾಗಿದೆ. ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದ ವೇಳೆ ಕ್ರಿಸ್ ಲಿನ್ ಬಲ ಭುಜಕ್ಕೆ ಗಾಯಮಾಡಿಕೊಂಡಿದ್ದು, ಐಪಿಎಲ್‌'ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ನವದೆಹಲಿ(ಫೆ.22): ಬಹುನಿರೀಕ್ಷಿತ 11ನೇ ಆವೃತ್ತಿ ಐಪಿಎಲ್'ಗೆ ದಿನಗಣನೆ ಆರಂಭವಾಗಿದ್ದು, ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಬ್ಯಾಟ್ಸ್'ಮನ್ ಕ್ರಿಸ್ ಲಿನ್ ಗಾಯಕ್ಕೆ ತುತ್ತಾಗಿದ್ದು, ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹೊರಬೀಳುವ ಸಾಧ್ಯತೆಯಿದೆ. ಎದುರಾಗಿದೆ.

ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 9.60 ಕೋಟಿ ರುಪಾಯಿ ನೀಡಿ ಆಸ್ಟ್ರೇಲಿಯಾದ ಕ್ರಿಸ್ ಲಿನ್ ಅವರನ್ನು ಕೆಕೆಆರ್ ತಮ್ಮ ತಂಡದಲ್ಲೇ ಉಳಿಸಿಕೊಂಡಿತ್ತು. ಆದರೆ ಗಾಯದ ಸಮಸ್ಯೆಯಿಂದಾಗಿ ಈ ಸಾಲಿನ ಐಪಿಎಲ್‌'ನಲ್ಲಿ ಲಿನ್ ಆಡುವುದು ಅನುಮಾನವಾಗಿದೆ. ನ್ಯೂಜಿಲೆಂಡ್ ವಿರುದ್ಧದ ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದ ವೇಳೆ ಕ್ರಿಸ್ ಲಿನ್ ಬಲ ಭುಜಕ್ಕೆ ಗಾಯಮಾಡಿಕೊಂಡಿದ್ದು, ಐಪಿಎಲ್‌'ನಲ್ಲಿ ಪಾಲ್ಗೊಳ್ಳುವುದು ಅನುಮಾನವಾಗಿದೆ.

ಗಾಯ ಗಂಭೀರವಾಗಿರದಿದ್ದರೂ ಮುಂಜಾಗ್ರತಾ ಕ್ರಮವಾಗಿ ಕ್ರಿಸ್ ಲಿನ್ ಮುಂಬರುವ ಪಾಕಿಸ್ತಾನ ಸೂಪರ್ ಲೀಗ್‌'ನಿಂದ ಹಿಂದೆ ಸರಿದಿದ್ದಾರೆ. ಒಂದೊಮ್ಮೆ ಅವರು ಐಪಿಎಲ್‌ನಿಂದಲೂ ದೂರ ಉಳಿದರೆ, ಕೆಕೆಆರ್‌ಗೆ ಭಾರೀ ಹಿನ್ನಡೆಯುಂಟಾಗಲಿದೆ. ಕೆಲ ದಿನಗಳ ಹಿಂದಷ್ಟೇ ಲಿನ್ ಅವರನ್ನು ತಂಡದ ನಾಯಕರಾಗಿ ಆಯ್ಕೆ ಮಾಡಿಕೊಳ್ಳಲು ಕೆಕೆಆರ್ ಪ್ರಾಂಚೈಸಿ ಒಲವು ತೋರಿದೆ ಎಂದು ಸುದ್ದಿಯಾಗಿತ್ತು.