ನೂತನ ಟಿ20 ಲೀಗ್ ಟೂರ್ನಿಯಲ್ಲಿ ಕ್ರೀಸ್ ಗೇಲ್-ಪಂದ್ಯ ಎಲ್ಲಿ? ಯಾವಾಗ?

Chris Gayle to be Part of Three-day T20 League in Abu Dhabi
Highlights

ಲೀಗ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಇದ್ದರೆ ಅಭಿಮಾನಿಗಳಿಗೆ ಭರಪೂರ ಮನರಂಜನೆ ಖಚಿತ. ಇನ್ನು ಕ್ರಿಸ್ ಗೇಲ್ ಇಲ್ಲದೆ ಯಾವುದೇ ಲೀಗ್ ಟೂರ್ನಿ ಪೂರ್ಣವಾಗೋದಿಲ್ಲ. ಇದೀಗ ನೂತನ ಟಿ20 ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಲು ಗೇಲ್ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾದರೆ ಗೇಲ್ ಯಾವ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಟೂರ್ನಿ ಯಾವಾಗ ಆರಂಭಗೊಳ್ಳಲಿದೆ. ಇಲ್ಲಿದೆ ವಿವರ.

ಅಬುದಾಬಿ(ಜು.02): ವೆಸ್ಟ್ಇಂಡೀಸ್ ಸ್ಪೋಟಕ ಬ್ಯಾಟ್ಸ್‌ಮನ್ ಕ್ರೀಸ್ ಗೇಲ್ ಇಲ್ಲದೆ ಯಾವ ಲೀಗ್ ಕ್ರಿಕೆಟ್ ಟೂರ್ನಿ ಪೂರ್ಣಗೊಳ್ಳುವುದಿಲ್ಲ. ಐಪಿಎಲ್, ಬಿಗ್‌ಬ್ಯಾಶ್, ಕೆರಿಬಿಯನ್ ಲೀಗ್ ಸೇರಿದಂತೆ ವಿಶ್ವದ ಎಲ್ಲಾ ಟಿ20 ಲೀಗ್ ಟೂರ್ನಿಗಳಲ್ಲಿ ಗೇಲ್ ಅಬ್ಬರಿಸಿದ್ದಾರೆ. ಇದೀಗ ನೂತನ ಟಿ20 ಲೀಗ್ ಟೂರ್ನಿ ಜೊತೆ ಕ್ರಿಸ್ ಗೇಲ್ ಒಪ್ಪಂದ ಮಾಡಿಕೊಂಡಿದ್ದಾರೆ. 

ನೂತನ ಕ್ರಿಕೆಟ್ ಲೀಗ್ ಆಯೋಜನೆಗೊಳ್ಳುತ್ತಿರುವುದು ಅಬುದಾಬಿಯಲ್ಲಿ. ಅಬುದಾಬಿ ಕ್ರಿಕೆಟ್ ಆಯೋಜಿಸುತ್ತಿರುವ ನೂತನ ಟಿ20 ಲೀಗ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಪಾಲ್ಗೊಳ್ಳುತ್ತಿದ್ದಾರೆ.  ಅಬುದಾಬಿ ಕ್ರಿಕೆಟ್ ಲೀಗ್ ಟೂರ್ನಿ 3 ದಿನಗಳ ಕಾಲ ನಡೆಯಲಿದೆ. ಓಟ್ಟು 6 ತಂಡಗಳು ಈ ನೂತನ ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಅಕ್ಟೋಬರ್ 4 ರಿಂದ 6 ವರಗೆ ಅಬುದಾಬಿಯಲ್ಲಿ ನಡೆಯಲಿದೆ. ಇಂಗ್ಲೆಂಡ್, ಸೌತ್ಆಫ್ರಿಕಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಯುಎಇನ ಲೀಗ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದೆ.

ಅಬುದಾಬಿ ಕ್ರಿಕೆಟ್ ಲೀಗ್ ಟೂರ್ನಿಗೆ ಎಮಿರೈಟ್ಸ್ ಕ್ರಿಕೆಟ್ ಬೋರ್ಡ್ ಐಸಿಸಿಯಿಂದ ಅನುಮತಿ ಪಡೆದಿದೆ. ಕ್ರಿಸ್ ಗೇಲ್ ಜೊತೆಗೆ ಸೌತ್ಆಫ್ರಿಕಾ ತಂಡದ ಆಲ್ಬೆ ಮಾರ್ಕೆಲ್, ಫರ್ಹಾನ್ ಬೆರ್ಹಡಿನ್, ಪಾಕಿಸ್ತಾನದ ಯಾಸಿರ್ ಶಾ ಸೇರಿದಂತೆ ಹಲವು ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ.   3 ದಿನಗಳ ಈ ಚುಟುಕು ಸರಣಿ ಯಾವ ರೀತಿ ಮೋಡಿ  ಮಾಡುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. 
 

loader