ಈಗಾಗಲೇ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕ್ರಮವಾಗಿ ಕೇರಳ ಬ್ಲಾಸ್ಟರ್ ಮತ್ತು ಅಥ್ಲೆಟಿಕೊ ಡಿ ಕೋಲ್ಕತಾ ತಂಡದ ಮಾಲೀಕರಾಗಿದ್ದಾರೆ.
ಬೆಂಗಳೂರು(ಜು.15): ಗುರುವಾರವಷ್ಟೇ ಬೆಂಗಳೂರಿನ ಐಯೋನಾ ಮನರಂಜನಾ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ವೆಸ್ಟ್ ಇಂಡಿಸ್ ಕ್ರಿಕೆಟಿಗ ಕ್ರಿಸ್ ಗೇಲ್, ಇದೀಗ ಇಂಡಿಯನ್ ಸೂಪರ್ ಲೀಗ್ ಫುಟ್'ಬಾಲ್'ನಲ್ಲೂ ತಂಡವೊಂದನ್ನು ಖರೀದಿಸಲು ಮುಂದಾಗಿದ್ದಾರೆ.
ಈಗಾಗಲೇ ಕೆಲತಂಡಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಆರ್'ಸಿಬಿ ಸ್ಟಾರ್ ಆಟಗಾರ ತಿಳಿಸಿದ್ದಾರೆ.
ಐಎಸ್'ಎಲ್'ನಂತಹ ಮಾದರಿಯಲ್ಲಿ ತಂಡ ಖರೀಧಿಸಬೇಕೆಂಬುದು ನನ್ನ ಇಚ್ಛೆಯಾಗಿದೆ' ಎಂದು ಗೇಲ್ ತಿಳಿಸಿದ್ದಾರೆ.
ವ್ಯವಹಾರದಲ್ಲಿ ಒಮ್ಮೆ ಮಿಂಚಲು ಆರಂಭಿಸಿದರೆ, ಜನ ಮತ್ತು ಕಂಪನಿಗಳು ಹುಡುಕಿಕೊಂಡು ಬರುತ್ತಾರೆ. ಆದರೆ ಕ್ರಿಕೆಟ್ ಸ್ವತಃ ವ್ಯವಹಾರವಾಗಿದೆ. ಎಲ್ಲರೂ ಸಾಧ್ಯವಾದಷ್ಟು ಆದಾಯ ಗಳಿಸಲು ಸದಾ ಬಯಸುತ್ತಾರೆ ಎಂದು ಗೇಲ್ ಹೇಳಿದ್ದಾರೆ.
ಈಗಾಗಲೇ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಕ್ರಮವಾಗಿ ಕೇರಳ ಬ್ಲಾಸ್ಟರ್ ಮತ್ತು ಅಥ್ಲೆಟಿಕೊ ಡಿ ಕೋಲ್ಕತಾ ತಂಡದ ಮಾಲೀಕರಾಗಿದ್ದಾರೆ.
