ಸ್ಪಿನ್‌ ಪಿಚ್‌ ಸಜ್ಜುಗೊಳಿಸಿ ಆತಿಥೇಯರಿಗೆ ಅನುಕೂಲ ಮಾಡಿಕೊಡುವ ಭರದಲ್ಲಿ ಎಂಸಿಎ ಕಳಪೆ ಪಿಚ್‌ ನಿರ್ಮಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ಕೇವಲ ಎರಡು ಮುಕ್ಕಾಲು ದಿನಗಳಲ್ಲೇ ಅಂತ್ಯಗೊಂಡಿದ್ದು ಭಾರೀ ಆಶ್ಚರ್ಯ ಮೂಡಿಸಿತ್ತು.
ಬೆಂಗಳೂರು(ಮಾ.14): ಭಾರತ, ಆಸ್ಪ್ರೇಲಿಯಾ ನಡುವಣ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಅತ್ಯುತ್ತಮ ಗುಣಮಟ್ಟದಾಗಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಶ್ಲಾಘಿಸಿದೆ. ಪುಣೆಯಲ್ಲಿ ಭಾರತದ ಹೀನಾಯ ಸೋಲಿನ ಬಳಿಕ, ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕಳಪೆ ಪಿಚ್ ನಿರ್ಮಿಸಿದ್ದಕ್ಕೆ ಐಸಿಸಿಯಿಂದ ಛೀಮಾರಿ ಹಾಕಿಸಿಕೊಂಡ ಪ್ರಸಂಗ ಬಿಸಿಸಿಐಗೆ ಮುಜುಗರ ತಂದಿತ್ತು.
ಸ್ಪಿನ್ ಪಿಚ್ ಸಜ್ಜುಗೊಳಿಸಿ ಆತಿಥೇಯರಿಗೆ ಅನುಕೂಲ ಮಾಡಿಕೊಡುವ ಭರದಲ್ಲಿ ಎಂಸಿಎ ಕಳಪೆ ಪಿಚ್ ನಿರ್ಮಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿತ್ತು. ಭಾರತ ಹಾಗೂ ಆಸ್ಪ್ರೇಲಿಯಾ ನಡುವಿನ ಮೊದಲ ಟೆಸ್ಟ್ ಕೇವಲ ಎರಡು ಮುಕ್ಕಾಲು ದಿನಗಳಲ್ಲೇ ಅಂತ್ಯಗೊಂಡಿದ್ದು ಭಾರೀ ಆಶ್ಚರ್ಯ ಮೂಡಿಸಿತ್ತು.
ಬೆಂಗಳೂರು ಟೆಸ್ಟ್ ಗೆಲುವಿನ ಬಳಿಕ ಭಾರತ ತಂಡ ಕೊನೆಯ ಎರಡು ಟೆಸ್ಟ್ಗಳಲ್ಲಿ ವಿಭಿನ್ನ ಪಿಚ್ನಲ್ಲಿ ಆಡಲು ಬಯಸುತ್ತಿದೆ ಎಂದು ತಂಡದ ಸದಸ್ಯರೊಬ್ಬರು ಇತ್ತೀಚೇಗಷ್ಟೇ ಹೇಳಿದ್ದರು. ಪಂದ್ಯ 5 ದಿನಗಳ ವರೆಗೂ ಸಾಗಲಿದ್ದು ಮೊದಲ ದಿನದ ಬದಲಾಗಿ 3ನೇ ದಿನದಿಂದ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ಸ್ಪಂದಿಸಲಿದೆ ಎಂದು ಹೇಳಲಾಗಿದೆ. 3 ದಿನದಲ್ಲಿ ಪಂದ್ಯ ಗೆದ್ದು ಪ್ರವಾಸಿ ತಂಡದ ಮೇಲೆ ಏಕಾಏಕಿ ಒತ್ತಡ ಹೇರುವ ಉದ್ದೇಶದಿಂದಾಗಿ ಪುಣೆಯಲ್ಲಿ ಸಂಪೂರ್ಣವಾಗಿ ಸ್ಪಿನ್ನರ್ಗಳಿಗೇ ನೆರವಾಗುವ ಪಿಚ್ ತಯಾರಿಸಲಾಗಿತ್ತು. ಮುಂದಿನ ಎರಡು ಟೆಸ್ಟ್ಗಳಿಗೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ಸಜ್ಜುಗೊಳಿಸಿದ್ದ ಮಾದರಿಯ ಪಿಚ್ಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.
