Asianet Suvarna News Asianet Suvarna News

ಚೀನಾ ಓಪನ್‌: ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟ ಶ್ರೀಕಾಂತ್‌

ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಹೋರಾಟ ಮುಂದುವರಿಸಿದೆ. ಪ್ರಣಯ್ , ಅಶ್ವಿನ್ ಪೊನ್ನಪ್ಪ ಮುಗ್ಗರಿಸಿದರೆ, ಶ್ರೀಕಾಂತ್ ಕಿದಂಬಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

China Open World Tour Srikanth Kidambi  Enters Pre Quarterfinals
Author
Bengaluru, First Published Nov 8, 2018, 7:43 AM IST

ಚೀನಾ(ನ.08): ಭಾರತದ ಅಗ್ರ ಶಟ್ಲರ್‌ ಕಿದಂಬಿ ಶ್ರೀಕಾಂತ್‌, ಚೀನಾ ಓಪನ್‌ ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಎಚ್‌.ಎಸ್‌.ಪ್ರಣಯ್‌ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದಿದ್ದಾರೆ.

5ನೇ ಶ್ರೇಯಾಂಕಿತ ಶ್ರೀಕಾಂತ್‌ ಬುಧವಾರ ನಡೆದ ಪಂದ್ಯದಲ್ಲಿ 9ನೇ ಶ್ರೇಯಾಂಕಿತ ಫ್ರಾನ್ಸ್‌ನ ಲುಕಾಸ್‌ ಕೊರ್ವಿ ವಿರುದ್ಧ 21-12, 21-16 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಸ್ಥಾನಕ್ಕಾಗಿ ಶ್ರೀಕಾಂತ್‌ ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೊ ವಿರುದ್ಧ ಸೆಣಸಲಿದ್ದಾರೆ.

ಇದೇ ವೇಳೆ ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಇಂಡೋನೇಷ್ಯಾದ ಜೊನಾಥನ್‌ ಕ್ರಿಸ್ಟಿವಿರುದ್ಧ ಪ್ರಣಯ್‌ 11-21, 14- 21 ಗೇಮ್‌ಗಳಲ್ಲಿ ಸೋಲುಂಡರು. ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಮಂಗಳವಾರ ಸುಲಭ ಗೆಲುವು ಸಾಧಿಸಿದ ಪಿ.ವಿ.ಸಿಂಧು 2ನೇ ಸುತ್ತಿಗೇರಿದರೆ, ಬುಧವಾರ ನಡೆದ ಪಂದ್ಯದಲ್ಲಿ ವೈಷ್ಣವಿ ರೆಡ್ಡಿ ಸೋಲುಂಡು ಹೊರಬಿದ್ದರು.

ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌ ಸಾಯಿರಾಜ್‌ ಜತೆ ಆಡಿದ ಅಶ್ವಿನಿ ಪೊನ್ನಪ್ಪ ಮೊದಲ ಸುತ್ತಲ್ಲೇ ಸೋತರೆ, ಮಹಿಳಾ ಡಬಲ್ಸ್‌ನಲ್ಲಿ ಸಿಕ್ಕಿ-ಅಶ್ವಿನಿ ಜೋಡಿ ಆರಂಭಿಕ ಸುತ್ತಲ್ಲೇ ಸೋಲುಂಡಿತು.

ಸಾತ್ವಿಕ್‌-ಚಿರಾಗ್‌ಗೆ ಜಯ: ಪುರುಷರ ಡಬಲ್ಸ್‌ನಲ್ಲಿ ವಿಶ್ವ ನಂ.6 ಡೆನ್ಮಾರ್ಕ್ನ ಪೀಟರ್‌ಸನ್‌ ಹಾಗೂ ಕೊಲ್ಡಿಂಗ್‌ ಜೋಡಿ ವಿರುದ್ಧ ಭಾರತದ ಸಾತ್ವಿಕ್‌ ಹಾಗೂ ಚಿರಾಗ್‌ ಶೆಟ್ಟಿಜೋಡಿ 23-21, 24-22 ಗೇಮ್‌ಗಳ ರೋಚಕ ಗೆಲುವು ಸಾಧಿಸಿ 2ನೇ ಸುತ್ತಿಗೇರಿದೆ.

Follow Us:
Download App:
  • android
  • ios