ಚೀನಾ ಓಪನ್: ಸಿಂಧು,ಶ್ರೀಕಾಂತ್’ಗೆ ಶಾಕ್: ಭಾರತದ ಹೋರಾಟ ಅಂತ್ಯ
ಮತ್ತೊಂದು ಪಂದ್ಯದಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಚೀನಾದ ಶೆನ್ ಯುಫಿ ಎದುರು 11-21, 21-11 ಹಾಗೂ 15-21 ಗೇಮ್’ಗಳಿಂದ ಸೋತು ತಮ್ಮ ಹೋರಾಟ ಅಂತ್ಯಗೊಳಿಸಿದರು.
ಬೀಜಿಂಗ್[ಸೆ.21]: ಭಾರತದ ಸ್ಟಾರ್ ಶೆಟ್ಲರ್’ಗಳಾದ ಪಿ.ವಿ. ಸಿಂಧು ಹಾಗೂ ಕೀದಾಂಬಿ ಶ್ರೀಕಾಂತ್ ಕ್ವಾರ್ಟರ್’ಫೈನಲ್ಸ್’ನಲ್ಲಿ ಮುಗ್ಗರಿಸುವ ಮೂಲಕ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತೀಯರ ಹೋರಾಟ ಅಂತ್ಯಗೊಂಡಂತೆ ಆಗಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಭಾರತದ ಅನುಭವಿ ಬ್ಯಾಡ್ಮಿಂಟನ್ ಪಟು ಶ್ರೀಕಾಂತ್ 21-9, 21-11 ನೇರ ಗೇಮ್’ಗಳಲ್ಲಿ ಶರಣಾಗುವ ಮೂಲಕ ನಿರಾಸೆ ಅನುಭವಿಸಿದರು. ಕೇವಲ 28 ನಿಮಿಷ ನಡೆದ ಕಾದಾಟದಲ್ಲಿ ಶ್ರೀಕಾಂತ್ ಮಣಿಸಿ ಮೊಮೊಟಾ ಸೆಮಿಫೈನಲ್’ಗೆ ಲಗ್ಗೆಯಿಟ್ಟಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಚೀನಾದ ಶೆನ್ ಯುಫಿ ಎದುರು 11-21, 21-11 ಹಾಗೂ 15-21 ಗೇಮ್’ಗಳಿಂದ ಸೋತು ತಮ್ಮ ಹೋರಾಟ ಅಂತ್ಯಗೊಳಿಸಿದರು.