ಈ ಕಳಂಕದಿಂದಾಗಿ ಮುಂದಿನ ಒಂದು ವರ್ಷ ಅಂತಾರಾಷ್ಟ್ರೀಯ ಕೂಟದ ವೇಟ್‌ಲಿಫ್ಟಿಂಗ್ ವಿಭಾಗದ ಸ್ಪರ್ಧೆಗೆ ಚೀನಾ ದೇಶವನ್ನು ಅನರ್ಹಗೊಳಿಸುವ ಸಾಧ್ಯತೆಯಿದೆ.

ಲುಸಾನ್ನೆ(ಜ.14): 2008ರ ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಮೂವರು ಚೀನಿ ವೇಟ್‌ಲಿಫ್ಟರ್‌'ಗಳಿಂದ ಪದಕವನ್ನು ಹಿಂಪಡೆಯಲಾಗಿದೆ.

ಈ ಮೂವರು ಸ್ಪರ್ಧಿಗಳು ಉದ್ದೀಪನಾ ಮದ್ದು ಸೇವಿಸಿರುವುದು ಸಾಭೀತಾಗಿರುವುದರಿಂದ ಈ ಕಟ್ಟುನಿಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಹೇಳಿದೆ.

ಈ ಕಳಂಕದಿಂದಾಗಿ ಮುಂದಿನ ಒಂದು ವರ್ಷ ಅಂತಾರಾಷ್ಟ್ರೀಯ ಕೂಟದ ವೇಟ್‌ಲಿಫ್ಟಿಂಗ್ ವಿಭಾಗದ ಸ್ಪರ್ಧೆಗೆ ಚೀನಾ ದೇಶವನ್ನು ಅನರ್ಹಗೊಳಿಸುವ ಸಾಧ್ಯತೆಯಿದೆ.

ಚೀನಾದ ಸ್ಪರ್ಧಿಗಳಾದ ಕಾವೊ ಲೀ (75ಕೆಜಿ), ಚೆನ್ ಕ್ಸಿಕ್ಸಿಯಾ (48ಕೆಜಿ) ಮತ್ತು ಲಿಯು ಚನ್‌'ಹಾಂಗ್ (69ಕೆಜಿ) ವಿಭಾಗದ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿದ್ದರು.