ಇಂಗ್ಲೆಂಡ್ ಕೌಂಟಿಗೆ ತೆರಳಲಿರುವ ಪೂಜಾರ
ಲಂಡನ್(ಆ.23): ಭಾರತ ತಂಡದ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಇಂಗ್ಲೆಂಡ್'ನ ನಾಟಿಂಗ್‌ಹ್ಯಾಮ್‌ಶೈರ್ ತಂಡ'ದಲ್ಲಿ ಆಡಲಿದ್ದಾರೆ. ಆ.28ರಂದು ನಾರ್ಥಾಂಪ್ಟನ್‌ಶೈರ್ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದು ಪ್ರಸಕ್ತ ಋತುವಿನಲ್ಲಿ ನಾಲ್ಕು ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಲಂಕಾ ಪ್ರವಾಸಕ್ಕೂ ಮುನ್ನಾ ನಾಟಿಂಗ್‌ಹ್ಯಾಮ್‌ಶೈರ್ ಪರ 4 ಪಂದ್ಯಗಳನ್ನು ಪೂಜಾರ ಆಡಿದ್ದರು.
