ದಿನದ ಬಹುತೇಕ ಸಮಯವನ್ನು ಅಭ್ಯಾಸ ಹಾಗೂ ಫಿಟ್ನೆಸ್ ತರಬೇತಿಯಲ್ಲಿ ಕಳೆಯುತ್ತೇನೆ ಎಂದಿರುವ ಬಲಗೈ ದಾಂಡಿಗ, ಉಳಿದ ಸಮಯವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆಯುವುದಾಗಿ ಹೇಳಿದ್ದಾರೆ.
ರಾಜ್‌ಕೋಟ್(ಮೇ.01): ಟೆಸ್ಟ್ ಬ್ಯಾಟಿಂಗ್ ತಜ್ಞ ಎಂದೇ ಖ್ಯಾತರಾಗಿರುವ ಚೇತೇಶ್ವರ್ ಪೂಜಾರ ‘‘ನಾನು ಟಿ.ವಿ.ಯಲ್ಲಿ ಐಪಿಎಲ್ ನೋಡುವುದಿಲ್ಲ’’ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ.
ದಿನದ ಬಹುತೇಕ ಸಮಯವನ್ನು ಅಭ್ಯಾಸ ಹಾಗೂ ಫಿಟ್ನೆಸ್ ತರಬೇತಿಯಲ್ಲಿ ಕಳೆಯುತ್ತೇನೆ ಎಂದಿರುವ ಬಲಗೈ ದಾಂಡಿಗ, ಉಳಿದ ಸಮಯವನ್ನು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಕಳೆಯುವುದಾಗಿ ಹೇಳಿದ್ದಾರೆ. ‘‘ದಿನದ 24 ಗಂಟೆಯೂ ಕ್ರಿಕೆಟ್‌ಗೆ ನೀಡಲು ಸಾಧ್ಯವಿಲ್ಲ. ನಾನು ಪಂದ್ಯಾವಳಿಯಲ್ಲಿ ಆಡುತ್ತಿಲ್ಲ ಎಂಬ ಕಾರಣದಿಂದ ವೀಕ್ಷಿಸುತ್ತಿಲ್ಲ ಎಂದು ಅರ್ಥವಲ್ಲ. ಹೆಚ್ಚಿನ ಸಮಯ ಟಿ.ವಿ. ಮುಂದೆ ಕೂರಲು ನನ್ನಿಂದಾಗುವುದಿಲ್ಲ’’ಎಂದು ಹೇಳಿದ್ದಾರೆ. ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪೂಜಾರ ಯಾವ ತಂಡಕ್ಕೂ ಬಿಕರಿಯಾಗಿರಲಿಲ್ಲ.
