ದುಬೈ[ಜ.09]: ಆಸ್ಪ್ರೇಲಿಯಾದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್‌ ಸರಣಿ ಗೆಲ್ಲಲು ಪ್ರಮುಖ ಕಾರಣರಾದ ಚೇತೇಶ್ವರ್‌ ಪೂಜಾರ, ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 3ನೇ ಸ್ಥಾನ ಪಡೆದಿದ್ದಾರೆ. 

ಇತಿಹಾಸ ಬರೆದ ಭಾರತ ತಂಡಕ್ಕೆ ಬಿಸಿಸಿಐ ಬಂಪರ್‌!

881 ರೇಟಿಂಗ್‌ ಅಂಕ ಹೊಂದಿರುವ ಪೂಜಾರ, ಆಸ್ಪ್ರೇಲಿಯಾದ ನಿಷೇಧಿತ ಕ್ರಿಕೆಟಿಗ ಸ್ಟೀವ್‌ ಸ್ಮಿತ್‌ (874 ಅಂಕ)ರನ್ನು 4ನೇ ಸ್ಥಾನಕ್ಕೆ ತಳ್ಳಿದ್ದಾರೆ. 4 ಪಂದ್ಯಗಳ ಸರಣಿಯಲ್ಲಿ 1200ಕ್ಕೂ ಹೆಚ್ಚು ಎಸೆತ ಎದುರಿಸಿದ ಪೂಜಾರ 521 ರನ್‌ ಪೇರಿಸಿದರು. ಅಮೋಘ ಪ್ರದರ್ಶನ ತೋರಿದ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯೂ ದೊರೆಯಿತು. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ 922 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ 897 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಹಾಗೂ ಪೂಜಾರ ಇಬ್ಬರೇ ಅಗ್ರ 10 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಆಟಗಾರರು.

ಇಂಡೋ-ಆಸಿಸ್ ಏಕದಿನ: ಜಸ್‌ಪ್ರೀತ್ ಬುಮ್ರಾಗೆ ರೆಸ್ಟ್, ಯುವ ವೇಗಿಗೆ ಸ್ಥಾನ!

21 ಸ್ಥಾನ ಜಿಗಿದ ಪಂತ್‌: ಭಾರತ ತಂಡದ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌, ಆಸ್ಪ್ರೇಲಿಯಾ ವಿರುದ್ಧ ಸರಣಿಯಲ್ಲಿ 350 ರನ್‌ ದಾಖಲಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಒಮ್ಮೆಲೇ 21 ಸ್ಥಾನಗಳ ಜಿಗಿತ ಕಂಡು 17ನೇ ಸ್ಥಾನ ಪಡೆದಿದ್ದಾರೆ. ರಿಷಭ್‌, ಭಾರತೀಯ ವಿಕೆಟ್‌ ಕೀಪರ್‌ಗಳ ಪೈಕಿ ಜಂಟಿ ಶ್ರೇಷ್ಠ ರಾರ‍ಯಂಕಿಂಗ್‌ ಪಡೆದಿದ್ದಾರೆ. 1973ರಲ್ಲಿ ಫಾರೂಖ್‌ ಎಂಜಿನಿಯರ್‌ ಸಹ 17ನೇ ಸ್ಥಾನ ಪಡೆದಿದ್ದರು. 19ನೇ ಸ್ಥಾನ ಪಡೆದಿದ್ದು ಧೋನಿಯೇ ವೃತ್ತಿ ಬದುಕಿನ ಶ್ರೇಷ್ಠ ಸಾಧನೆ ಎನಿಸಿತ್ತು. ಇದೇ ವೇಳೆ ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ 5 ಸ್ಥಾನಗಳ ಏರಿಕೆ ಕಂಡು 62ನೇ ಸ್ಥಾನ ಪಡೆದಿದ್ದಾರೆ.