ನಾಲ್ವರು ಕ್ವಾರ್ಟರ್‌ಗೇರಿರುವ ಬಗ್ಗೆ ಪ್ರತಿಕ್ರಿಯಿಸಿರುವ 5 ಬಾರಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌, ಇದೊಂದು ಐತಿಹಾಸಿಕ ಕ್ಷಣ ಎಂದಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಪ್ರಶಸ್ತಿ ಗೆದ್ದ ಬಳಿಕ ಭಾರತದ ಯಾವುದೇ ಚೆಸ್‌ ಪಟು ವಿಶ್ವಕಪ್‌ ಗೆದ್ದಿಲ್ಲ.

ಬಾಕು(ಅಜರ್‌ಬೈಜಾನ್): 2023ರ ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ ಭಾರತದ ನಾಲ್ವರು ಚೆಸ್‌ ಪಟುಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ಅಂತಿಮ 8ರ ಘಟ್ಟದ ಮೊದಲ ಸುತ್ತಿನಲ್ಲಿ ಮಿಶ್ರ ಫಲ ಅನುಭವಿಸಿದ್ದಾರೆ. ಡಿ.ಗುಕೇಶ್‌, ಆರ್‌.ಪ್ರಜ್ಞಾನಂದ, ಅರ್ಜುನ್‌ ಎರಿಗೈಸಿ, ವಿದಿತ್‌ ಗುಜರಾತಿ ಸದ್ಯ ಕ್ವಾರ್ಟರ್‌ನಲ್ಲಿ ಆಡುತ್ತಿದ್ದಾರೆ.

ಗುಕೇಶ್‌ಗೆ ಮಂಗಳವಾರ ಕ್ವಾರ್ಟರ್‌ನಲ್ಲಿ 5 ಬಾರಿ ವಿಶ್ವ ಚಾಂಪಿಯನ್‌, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ವಿರುದ್ಧ ಮೊದಲ ಸುತ್ತಿನಲ್ಲಿ ಸೋಲು ಎದುರಾಯಿತು. ಬುಧವಾರ ಮತ್ತೊಂದು ಸುತ್ತಿನ ಪಂದ್ಯ ನಡೆಯಲಿದ್ದು, ಸೆಮೀಸ್‌ ರೇಸ್‌ನಲ್ಲಿ ಉಳಿಯಲು ಗುಕೇಶ್‌ ಗೆಲ್ಲಲೇಬೇಕಿದೆ. ಗೆದ್ದರೆ ಪಂದ್ಯ ಟೈ ಬ್ರೇಕರ್‌ಗೆ ಹೋಗಲಿದೆ. ಇನ್ನು, ಪ್ರಜ್ಞಾನಂದ ವಿರುದ್ಧದ ಕ್ವಾರ್ಟರ್‌ನ ಮೊದಲ ಸುತ್ತಿನ ಹಣಾಹಣಿಯಲ್ಲಿ ಅರ್ಜುನ್‌ ಗೆಲುವು ಪಡೆದಿದ್ದು, ಬುಧವಾರ 2ನೇ ಸುತ್ತಿನಲ್ಲಿ ಜಯಿಸಿದರೆ ಸೆಮೀಸ್‌ಗೇರಲಿದ್ದಾರೆ. ಇದೇ ವೇಳೆ ವಿದಿತ್‌ ಹಾಗೂ ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ನಡುವಿನ ಸುಮಾರು 6 ಗಂಟೆಗಳ ಕಾಲ ನಡೆದ ಮೊದಲ ಸುತ್ತಿನ ಪಂದ್ಯ ಡ್ರಾಗೊಂಡಿತು. 2ನೇ ಪಂದ್ಯ ಬುಧವಾರ ನಡೆಯಲಿದೆ.

ವಿಶ್ವ ಕುಸ್ತಿಗೆ ಆಗಸ್ಟ್ 25, 26ಕ್ಕೆ ಆಯ್ಕೆ ಟ್ರಯಲ್ಸ್; ಪಟಿಯಾಲಾದಲ್ಲಿ ಟ್ರಯಲ್ಸ್‌..!

ನಾಲ್ವರು ಕ್ವಾರ್ಟರ್‌ಗೇರಿರುವ ಬಗ್ಗೆ ಪ್ರತಿಕ್ರಿಯಿಸಿರುವ 5 ಬಾರಿ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌, ಇದೊಂದು ಐತಿಹಾಸಿಕ ಕ್ಷಣ ಎಂದಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಪ್ರಶಸ್ತಿ ಗೆದ್ದ ಬಳಿಕ ಭಾರತದ ಯಾವುದೇ ಚೆಸ್‌ ಪಟು ವಿಶ್ವಕಪ್‌ ಗೆದ್ದಿಲ್ಲ.

ಏಷ್ಯಾಡ್‌ನಿಂದ ಹೊರಕ್ಕೆ: ಜಿಮ್ನಾಸ್ಟ್‌ ದೀಪಾ ಬೇಸರ

ನವದೆಹಲಿ: ಆಯ್ಕೆ ಟ್ರಯಲ್ಸ್‌ನಲ್ಲಿ ಗೆದ್ದ ಹೊರತಾಗಿಯೂ ಏಷ್ಯನ್‌ ಗೇಮ್ಸ್‌ಗೆ ಆಯ್ಕೆ ಮಾಡದ್ದಕ್ಕೆ ಭಾರತದ ತಾರಾ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಕಾರ್‌ ಕ್ರೀಡಾ ಸಚಿವಾಲಯ ಹಾಗೂ ಸಾಯ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಏಷ್ಯಾಡ್‌ಗೆ ಆಯ್ಕೆಯಾಗದಿರುವುದು ನನ್ನನ್ನು ತೀವ್ರವಾಗಿ ಕುಗ್ಗಿಸಿದೆ. ಈ ಬಗ್ಗೆ ಯಾವ ಅಧಿಕಾರಿಯೂ ನನ್ನನ್ನು ಸಂಪರ್ಕಿಸಿ ಮಾತನಾಡಿಲ್ಲ ಮತ್ತು ಯಾವುದೇ ಕಾರಣ ನೀಡಿಲ್ಲ’ ಎಂದಿದ್ದಾರೆ. ಕಳೆದೊಂದು ವರ್ಷದ ಪ್ರದರ್ಶನದ ಮೇಲೆ ಏಷ್ಯಾಡ್‌ಗೆ ಆಯ್ಕೆ ಮಾಡುವುದಾಗಿ ಕ್ರೀಡಾ ಸಚಿವಾಲಯ ಹೇಳಿತ್ತು. ಆದರೆ ಡೋಪಿಂಗ್‌ ಪ್ರಕರಣದಲ್ಲಿ 2 ನಿಷೇಧಕ್ಕೊಳಗಾಗಿದ್ದ ದೀಪಾ, ಇತ್ತೀಚೆಗಷ್ಟೇ ಕ್ರೀಡೆಗೆ ಮರಳಿದ್ದರು.

ಇವರೇ ನೋಡಿ ಕ್ರಿಕೆಟಿಗ ಧೋನಿ ಸಹೋದರಿ, ವೃತ್ತಿಯಲ್ಲಿ ಟೀಚರ್‌, ಮದುವೆಯಾಗಿದ್ದು ಮಹಿ ಸ್ನೇಹಿತನನ್ನೇ!

ಏಷ್ಯಾಡ್‌ಗೆ ಗಾಯಾಳು ವಿನೇಶ್‌ ಫೋಗಟ್‌ ಗೈರು!

ನವದೆಹಲಿ: ಭಾರತದ ತಾರಾ ಕುಸ್ತಿಪಟು, ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ವಿನೇಶ್‌ ಫೋಗಟ್‌ ಮಂಡಿ ಗಾಯದಿಂದಾಗಿ ಏಷ್ಯನ್‌ ಗೇಮ್ಸ್‌ನಿಂದ ಹೊರಗುಳಿಯಲಿದ್ದಾರೆ. 2018ರ ಏಷ್ಯಾಡ್‌ನಲ್ಲಿ ಚಿನ್ನ ಗೆದ್ದಿದ್ದ ವಿನೇಶ್‌, ಗುರುವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹೀಗಾಗಿ ಆ.25, 26ರಂದು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ ಆಯ್ಕೆ ಟ್ರಯಲ್ಸ್‌ಗೂ ಅವರು ಗೈರಾಗಲಿದ್ದಾರೆ. ಇದರೊಂದಿಗೆ ಆಯ್ಕೆ ಟ್ರಯಲ್ಸ್‌ನಲ್ಲಿ ಗೆದ್ದಿದ್ದ ಯುವ ಕುಸ್ತಿಪಟು ಅಂತಿಮ್‌ ಪಂಘಲ್‌ ಏಷ್ಯನ್‌ ಗೇಮ್ಸ್‌ನ 53 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಭಾರತದ ಮಾಜಿ ಫುಟ್ಬಾಲಿಗ ಮೊಹಮದ್ ಹಬೀಬ್ ನಿಧನ

ನವದೆಹಲಿ: ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೊಹಮದ್ ಹಬೀಬ್(74) ಮಂಗಳವಾರ ದೀರ್ಘ ಕಾಲದ ಅನಾರೋಗ್ಯದ ಕಾರಣ ನಿಧನರಾದರು. 1970ರ ಏಷ್ಯನ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ತಂಡದ ಸದಸ್ಯರಾಗಿದ್ದ ಹಬೀಬ್, ಹಲವು ವರ್ಷಗಳ ಕಾಲ ಭಾರತ ತಂಡದಲ್ಲಿದ್ದರು. 1977ರಲ್ಲಿ ಮೋಹನ್ ಬಗಾನ್‌ ಪರ ಸ್ನೇಹಾರ್ಥ ಪಂದ್ಯದಲ್ಲಿ ದಿಗ್ಗಜ ಆಟಗಾರ ಪೀಲೆ ಅವರ ತಂಡದ ವಿರುದ್ದ ಆಡಿದ್ದರು.