Asianet Suvarna News Asianet Suvarna News

ಇವರೇ ನೋಡಿ ಕ್ರಿಕೆಟಿಗ ಧೋನಿ ಸಹೋದರಿ, ವೃತ್ತಿಯಲ್ಲಿ ಟೀಚರ್‌, ಮದುವೆಯಾಗಿದ್ದು ಮಹಿ ಸ್ನೇಹಿತನನ್ನೇ!

ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಚಾಂಪಿಯನ್ ನಾಯಕ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಧೋನಿ ಅವರ ಕ್ರಿಕೆಟ್ ಬದುಕಿನ ಯಶಸ್ಸಿನ ಹಿಂದೆ ಅವರ ಅಕ್ಕ ಜಯಂತಿ ಗುಪ್ತಾ ಅವರ ಪಾತ್ರವಿದೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

Meet Jayanti Gupta MS Dhoni elder sister who married CSK skipper best friend, now works as teacher kvn
Author
First Published Aug 14, 2023, 6:05 PM IST

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತಿನ ಅನಭಿಶಕ್ತ ದೊರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಎನ್ನುವ ಹೆಗ್ಗಳಿಕೆ ಧೋನಿಯದ್ದು. ಧೋನಿ ಬಳಿಕ ಭಾರತದ ಯಾವೊಬ್ಬ ನಾಯಕನೂ ಇದುವರೆಗೆ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್‌ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಘೋಷಿಸಿದ್ದರೂ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. 2023ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಎಂ ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಧೋನಿ ಅವರ ಕ್ರಿಕೆಟ್ ಬದುಕಿನ ಯಶಸ್ಸಿನ ಹಿಂದೆ ಅವರ ಅಕ್ಕ ಜಯಂತಿ ಗುಪ್ತಾ ಅವರ ಪಾತ್ರವಿದೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಕೇವಲ ಐಪಿಎಲ್‌ ಅಷ್ಟೇ ಆಡುತ್ತಿರುವ ಧೋನಿ, ಪ್ರತಿ ವರ್ಷ ಸರಾಸರಿ 50 ಕೋಟಿ ರುಪಾಯಿ ಸಂಪಾದನೆ ಮಾಡುತ್ತಾ ಬಂದಿದ್ದಾರೆ. ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್‌ಗೆ ಬರುವ ಮುನ್ನ ಅವರ ಕುಟುಂಬ ಸಾಮಾನ್ಯ ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದರು. ಅವರ ತಂದೆ ಪಾನ್ ಸಿಂಗ್ ಧೋನಿ ಮಧ್ಯಮ ಹಂತದ ಸರ್ಕಾರಿ ಉದ್ಯೋಗ ನಡೆಸುತ್ತಿದ್ದರು. 

ರೋಹಿತ್ ಶರ್ಮಾ ಟೆಂಪಲ್ ರನ್‌; ಏಷ್ಯಾಕಪ್‌ಗೂ ಮುನ್ನ ಬಾಲಾಜಿ ದರ್ಶನ ಪಡೆದ ಟೀಂ ಇಂಡಿಯಾ ನಾಯಕ..!

ಪಾನ್ ಸಿಂಗ್ ಧೋನಿ ಹಾಗೂ ದೇವಕಿ ದೇವಿ ದಂಪತಿಯ ಮೊದಲ ಮಗಳಾಗಿ ಜಯಂತಿ ಗುಪ್ತಾ ಜನಿಸಿದರು. ಧೋನಿಗಿಂತ ಅವರ ಅಕ್ಕ ಜಯಂತಿ ಗುಪ್ತಾ 3-4 ವರ್ಷಕ್ಕೆ ದೊಡ್ಡವರು. ತಾನು ಕ್ರಿಕೆಟಿಗನಾಗಿ ದೇಶವನ್ನು ಪ್ರತಿನಿಧಿಸಬೇಕು ಎಂದು ಆಸೆ ವ್ಯಕ್ತಪಡಿಸಿದಾಗ ಧೋನಿಗೆ ಅಕ್ಷರಶಃ ಬೆನ್ನೆಲುಬಾಗಿ ನಿಂತಿದ್ದೇ ಅವರ ಅಕ್ಕ ಜಯಂತಿ ಗುಪ್ತಾ. ಜಯಂತಿ ಗುಪ್ತಾ ಅವರ ಸಪೋರ್ಟ್ ಇಲ್ಲದಿದ್ದರೇ ಬಹುಶಃ ಧೋನಿಯಂತಹ ಅಪ್ಪಟ ಕ್ರಿಕೆಟ್‌ ಪ್ರತಿಭೆ ಬೆಳಕಿಗೆ ಬರುತ್ತಿರಲಿಲ್ಲವೇನೋ. ಧೋನಿ ಕ್ರಿಕೆಟಿಗನಾಗುವುದು ಸ್ವತಃ ಅವರ ತಂದೆಗೂ ಇಷ್ಟವಿರಲಿಲ್ಲ. ಆದರೆ ಅವರ ಅಕ್ಕ ಜಯಂತಿ ಗುಪ್ತಾ, ತಮ್ಮ ಪೋಷಕರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಇದಷ್ಟೇ ಧೋನಿ ಗುರಿ ಮುಟ್ಟಲು ತನ್ನದೇ ಆದ ಪಾತ್ರವನ್ನು ನಿಭಾಯಿಸಿದ್ದರು.

 
 
 
 
 
 
 
 
 
 
 
 
 
 
 

A post shared by Team Ms Dhoni (@teamdhoni7)

ಸದ್ಯ ಮಹೇಂದ್ರ ಸಿಂಗ್ ಧೋನಿ, ಜಗತ್ತಿನ ಪ್ರಖ್ಯಾತ ಕ್ರಿಕೆಟಿಗ. ಅವರ ನಿವ್ವಳ ಮೌಲ್ಯ 1000 ಕೋಟಿ ರುಪಾಯಿ ಗಡಿ ದಾಟಿದೆ. ಹೀಗಿದ್ದೂ ಧೋನಿ ಸಹೋದರಿ ಜಯಂತಿ ಗುಪ್ತಾ ಸಾಮಾನ್ಯ ಜೀವನ ಜೀವಿಸುತ್ತಿದ್ದಾರೆ. ಯಾವಾಗಲೂ ಮಾಧ್ಯಮದವರಿಂದ ದೂರವೇ ಉಳಿಯುತ್ತಾ ಬಂದಿದ್ದಾರೆ. ಜಾರ್ಖಂಡ್‌ನ ರಾಂಚಿಯಲ್ಲಿ ಜಯಂತಿ ಗುಪ್ತಾ ತಮ್ಮ ಪಾಡಿಗೆ ತಮ್ಮ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ತಿಲಕ್ ವರ್ಮಾ 2023ರ ವಿಶ್ವಕಪ್ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ನೀಡಿದ ರೋಹಿತ್ ಶರ್ಮಾ..!

ಇದನ್ನು ಕೇಳಿದರೆ ನಿಮಗೂ ಅಚ್ಚರಿಯಾಗಬಹುದು. ಹಲವು ಮಾಧ್ಯಮಗಳ ವರದಿಯ ಪ್ರಕಾರ, ಎಂ ಎಸ್ ಧೋನಿ ಅಕ್ಕ ಜಯಂತಿ ಗುಪ್ತಾ, ಈಗಲೂ ಸಹಾ ರಾಂಚಿಯ ಪಬ್ಲಿಕ್ ಸ್ಕೂಲ್‌ನಲ್ಲಿ ಇಂಗ್ಲೀಷ್ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾರೆ.

ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಧೋನಿಯ ಅಕ್ಕ ಜಯಂತಿ ಗುಪ್ತಾ, ಗೌತಮ್ ಗುಪ್ತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌತಮ್ ಗುಪ್ತಾ, ರಾಂಚಿಯಲ್ಲಿ ಧೋನಿಯ ಅತ್ಯಾಪ್ತ ಗೆಳೆಯರಲ್ಲಿ ಒಬ್ಬರಾಗಿದ್ದರು. ಗೌತಮ್ ಗುಪ್ತಾ, ಧೋನಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕ್ರಿಕೆಟಿಗನಾಗಿ ರೂಪುಗೊಳ್ಳಲು ಮಹತ್ವದ ಪಾತ್ರವನ್ನು ವಹಿಸಿದ್ದರು. ಕೊನೆಗೆ ಧೋನಿ ಆಪ್ತ ಗೆಳೆಯನ ಕೈಹಿಡಿಯುವಲ್ಲಿ ಜಯಂತಿ ಗುಪ್ತಾ ಯಶಸ್ವಿಯಾಗಿದ್ದರು.

Follow Us:
Download App:
  • android
  • ios