ಸನ್'ರೈಸರ್ಸ್'ಗೆ ಕಠಿಣ ಸವಾಲು ನೀಡಿದ ಚೆನ್ನೈ
ಹೈದರಾಬಾದ್: ಅಂಬಟಿ ರಾಯುಡು(79), ಸುರೇಶ್ ರೈನಾ 54* ಆಕರ್ಷಕ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್'ಕಿಂಗ್ಸ್ 182 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಹೈದರಾಬಾದ್: ಅಂಬಟಿ ರಾಯುಡು(79), ಸುರೇಶ್ ರೈನಾ 54* ಆಕರ್ಷಕ ಅರ್ಧಶತಕಗಳ ನೆರವಿನಿಂದ ಚೆನ್ನೈ ಸೂಪರ್'ಕಿಂಗ್ಸ್ 182 ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಆರಂಭದಲ್ಲೇ ವಾಟ್ಸನ್ ಹಾಗೂ ಡು ಪ್ಲೆಸಿಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಬಳಿಕ ಸುರೇಶ್ ರೈನಾ(54) ಹಾಗೂ ಅಂಬಟಿ ರಾಯುಡು(79) ಮೂರನೇ ವಿಕೆಟ್'ಗೆ 112 ರನ್'ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ಕೇವಲ 37 ಎಸೆತಗಳನ್ನು ಎದುರಿಸಿದ ರಾಯುಡು 79 ರನ್ ಸಿಡಿಸಿದರು. ಇನ್ನು ರೈನಾ 54 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಧೋನಿ 1 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನಿಂದ 25 ರನ್ ಸಿಡಿಸಿ ಮಿಂಚಿದರು.
ಸನ್'ರೈಸರ್ಸ್ ಪರ ಭುವನೇಶ್ವರ್ ಕುಮಾರ್, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಚೆನ್ನೈ ಸೂಪರ್'ಕಿಂಗ್ಸ್: 182/3
ಅಂಬಟಿ ರಾಯುಡು: 79
ಭುವನೇಶ್ವರ್ ಕುಮಾರ್: 22/1
(* ವಿವರ ಅಪೂರ್ಣ)