ಚೆನ್ನೈ ಹಾಗೂ ರಾಜಸ್ತಾನ ತಂಡಗಳು ಮುಂದಿನ ವರ್ಷ ಟೂರ್ನಿಗೆ ಕಮ್'ಬ್ಯಾಕ್ ಮಾಡುವುದರಿಂದ ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡಗಳ ಅಭಿಯಾನ ಅಂತ್ಯವಾದಂತಾಗಿದೆ...
ಬೆಂಗಳೂರು(ಮೇ.22): ಪುಣೆ ಸೂಪರ್'ಜೈಂಟ್ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಮಣಿಸಿ ಮುಂಬೈ ಇಂಡಿಯನ್ಸ್ ದಾಖಲೆ ಬಾರಿಗೆ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ.
ಸತತ ಎರಡು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ(2010-2011) ಚೆನ್ನೈ ಸೂಪರ್'ಕಿಂಗ್ಸ್ 10ನೇ ಆವೃತ್ತಿಯ ಫೈನಲ್ ಫಲಿತಾಂಶ ಹೊರಬಿದ್ದ ತಕ್ಷಣ ಮುಂದಿನ ವರ್ಷ ನಾವೂ ಟೂರ್ನಿಗೆ ವಾಪಸ್ಸಾಗಲಿದ್ದೇವೆ ಎಂಬರ್ಥದಲ್ಲಿ ಟ್ವೀಟ್ ಮಾಡಿದೆ.
2013ರಲ್ಲಿ ನಡೆದ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಪ್ರಾಂಚೈಸಿಗಳು ಬೆಟ್ಟಿಂಗ್ ನಡೆಸಿದ್ದರು ಎಂಬ ಆರೋಪದಡಿ 2015ರಲ್ಲಿ ಈ ಎರಡು ತಂಡಗಳನ್ನು 2 ವರ್ಷ ರದ್ದು ಮಾಡಲಾಗಿತ್ತು.
ಚೆನ್ನೈ ಹಾಗೂ ರಾಜಸ್ತಾನ ತಂಡಗಳು ಮುಂದಿನ ವರ್ಷ ಟೂರ್ನಿಗೆ ಕಮ್'ಬ್ಯಾಕ್ ಮಾಡುವುದರಿಂದ ಗುಜರಾತ್ ಲಯನ್ಸ್ ಹಾಗೂ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡಗಳ ಅಭಿಯಾನ ಅಂತ್ಯವಾದಂತಾಗಿದೆ...
ಅಷ್ಟಕ್ಕೂ ಚೆನ್ನೈ ಸೂಪರ್'ಕಿಂಗ್ಸ್ ತಂಡ ಏನಂತ ಟ್ವೀಟ್ ಮಾಡಿದೆ ಅಂತ ನೀವೊಮ್ಮೆ ನೋಡಿ...