ಇಂದೇ ಸರಣಿ ಗೆಲ್ಲುತ್ತಾ ಟೀಂ ಇಂಡಿಯಾ..? ತಂಡದಲ್ಲಿ ಏನು ಬದಲಾವಣೆಗಳಾಗಬಹುದು..?

Chance for India to seal limited overs leg with T20I series win
Highlights

ಜೊಹಾನ್ಸ್‌'ಬರ್ಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ, 28 ರನ್‌'ಗಳಿಂದ ಗೆದ್ದಿತ್ತು. 1-2 ಅಂತರದಲ್ಲಿ ಟೆಸ್ಟ್ ಸರಣಿ ಸೋತಿದ್ದ ಭಾರತ, 5-1ರಲ್ಲಿ ಏಕದಿನ ಸರಣಿ ಜಯಿಸಿ ಆತಿಥೇಯರಿಗೆ ಅಚ್ಚರಿಯ ಆಘಾತ ನೀಡಿತ್ತು. ತನ್ನ ಗೆಲುವಿನ ಓಟವನ್ನು ಮುಂದುವರಿಸಿರುವ ಭಾರತ, ಸಂಭ್ರಮದೊಂದಿಗೆ ಆಫ್ರಿಕಾ ಪ್ರವಾಸವನ್ನು ಮುಕ್ತಾಯಗೊಳಿಸಲು ಕಾತರಿಸುತ್ತಿದೆ.

ಸೆಂಚೂರಿಯನ್(ಫೆ.21): ಅಸಾಧಾರಣ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾಕ್ಕೆ ಉಸಿರುಗಟ್ಟಿಸಿರುವ ಭಾರತ ತಂಡ, ಏಕದಿನ ಸರಣಿ ಬಳಿಕ ಟಿ20 ಟ್ರೋಫಿಯನ್ನೂ ತನ್ನ ಮಡಲಿಗೆ ಹಾಕಿಕೊಳ್ಳುವ ಉತ್ಸಾಹದಲ್ಲಿದೆ. ಇಂದಿನಿಂದ ಉಭಯ ತಂಡಗಳು ನಡುವಿನ 3 ಪಂದ್ಯಗಳ ಸರಣಿಯ 2ನೇ ಪಂದ್ಯ ನಡೆಯಲಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಳ್ಳುವುದು ವಿರಾಟ್ ಪಡೆಯ ಲೆಕ್ಕಾಚಾರವಾಗಿದೆ.

ಜೊಹಾನ್ಸ್‌'ಬರ್ಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ, 28 ರನ್‌'ಗಳಿಂದ ಗೆದ್ದಿತ್ತು. 1-2 ಅಂತರದಲ್ಲಿ ಟೆಸ್ಟ್ ಸರಣಿ ಸೋತಿದ್ದ ಭಾರತ, 5-1ರಲ್ಲಿ ಏಕದಿನ ಸರಣಿ ಜಯಿಸಿ ಆತಿಥೇಯರಿಗೆ ಅಚ್ಚರಿಯ ಆಘಾತ ನೀಡಿತ್ತು. ತನ್ನ ಗೆಲುವಿನ ಓಟವನ್ನು ಮುಂದುವರಿಸಿರುವ ಭಾರತ, ಸಂಭ್ರಮದೊಂದಿಗೆ ಆಫ್ರಿಕಾ ಪ್ರವಾಸವನ್ನು ಮುಕ್ತಾಯಗೊಳಿಸಲು ಕಾತರಿಸುತ್ತಿದೆ.

ಭಾರತ ತಂಡದಲ್ಲಿ ಬದಲಾವಣೆ?: ಮೊದಲ ಪಂದ್ಯದ ವೇಳೆ ಸಣ್ಣ ಪ್ರಮಾಣದ ಗಾಯಕ್ಕೆ ಗುರಿಯಾಗಿದ್ದ ನಾಯಕ ವಿರಾಟ್ ಕೊಹ್ಲಿ, ಚೇತರಿಸಿಕೊಂಡಿದ್ದು 2ನೇ ಪಂದ್ಯಕ್ಕೆ ಲಭ್ಯರಾಗುವುದಾಗಿ ತಂಡದ ಮೂಲಗಳು ಸ್ಪಷ್ಟಪಡಿಸಿವೆ. ಒಂದೊಮ್ಮೆ ಅವರು ಅಲಭ್ಯರಾದಲ್ಲಿ, ಕೆ.ಎಲ್.ರಾಹುಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದೆ.

ಇಲ್ಲಿನ ಸೂಪರ್ ಸ್ಪೋರ್ಟ್ ಪಾರ್ಕ್ ಪಿಚ್ ನಿಧಾನವಾದ ಬೌಲಿಂಗ್‌'ಗೆ ಹೆಚ್ಚು ಸಹಕರಿಸಲಿದ್ದು, ತಂಡ ಇಬ್ಬರು ತಜ್ಞ ಸ್ಪಿನ್ನರ್‌'ಗಳನ್ನು ಆಡಿಸಬಹುದು ಎಂದು ಅಂದಾಜಿಸಲಾಗಿದೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ಕುಲ್ದೀಪ್ ಯಾದವ್, ಹನ್ನೊಂದರ ಬಳಗಕ್ಕೆ ಮರಳಬಹುದು ಎನ್ನಲಾಗಿದೆ. ಈ ಪಂದ್ಯದಲ್ಲಿ ಸುರೇಶ್ ರೈನಾ ಸಹ ಕೆಲ ಓವರ್‌'ಗಳನ್ನು ಬೌಲ್ ಮಾಡಿದರೆ ಆಶ್ಚರ್ಯವಿಲ್ಲ. ಎಂ.ಎಸ್.ಧೋನಿ ಮೇಲ್ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಇಚ್ಛಿಸುತ್ತಿದ್ದರೂ, ತಂಡ ಮಾತ್ರ ಅವರನ್ನು ಫಿನಿಶರ್ ಪಾತ್ರವನ್ನೇ ನಿರ್ವಹಿಸಲು ಸೂಚಿಸುತ್ತಿದೆ.

ಮೊದಲ ಪಂದ್ಯದಲ್ಲಿ ಬ್ಯಾಟ್ಸ್‌'ಮನ್‌'ಗಳಿಗೆ ಪಿಚ್ ಅನುಕೂಲವಾಗಿದ್ದರಿಂದ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ, ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿರುವ ರೈನಾರನ್ನು 3ನೇ ಕ್ರಮಾಂಕದಲ್ಲಿ ಆಡಿಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಎಂದಿನಂತೆ 3ನೇ ಕ್ರಮಾಂಕದಲ್ಲೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಧವನ್ ಉತ್ತಮ ಲಯದಲ್ಲಿದ್ದು, ಮತ್ತೊಮ್ಮೆ ಸಿಡಿಯುವ ಉತ್ಸಾಹದಲ್ಲಿದ್ದಾರೆ.

ಪಂದ್ಯ ಆರಂಭ: ರಾತ್ರಿ 9.30ಕ್ಕೆ; ನೇರ ಪ್ರಸಾರ: ಸೋನಿ ಟೆನ್ 1

 

loader