ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ರನ್ನರ್ ಅಪ್ ಪ್ರಶಸ್ತಿ

Champions Trophy Hockey -India finish runners up after losing 1-3 to Australia in shootout
Highlights

ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಪ್ರಶಸ್ತಿ ಸುತ್ತಿನ ಹೋರಾಟ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ರೋಚಕ ಹೋರಾಟ ಡ್ರಾದಲ್ಲಿ ಅಂತ್ಯಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಈ ರೋಚಕ ಹೋರಾಟ ಹೇಗಿತ್ತು? ಇಲ್ಲಿದೆ ವಿವರ.

ಬ್ರೆಡ(ಜು.01): ಹಾಕಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಫೈನಲ್ ಪಂದ್ಯ 1-1 ಅಂತರದಲ್ಲಿ ಸಮಭಲಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಫಲಿತಾಂಶ ನಿರ್ಧರಿಸಲಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಆಸ್ಟ್ರೇಲಿಯಾ 3 ಗೋಲು ಸಿಡಿಸಿ ಮುನ್ನಡೆ ಪಡೆದರೆ, ಭಾರತ 1 ಗೋಲು ಗಳಿಸಿತು. ಈ ಮೂಲಕ ಆಸ್ಟ್ರೇಲಿಯಾ ಚಾಂಪಿನ್ ಪಟ್ಟ ಉಳಿಸಿಕೊಂಡರೆ, ಭಾರತ ವಿರೋಚಿತ ಸೋಲು ಕಂಡಿತು.

ಪಂದ್ಯದ ಆರಂಭದಲ್ಲೇ ಭಾರತ ಅವಕಾಶವನ್ನ ಕಳೆದುಕೊಂಡಿತು. 7ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಗೆದ್ದ ಭಾರತ, ಗೋಲಾಗಿ ಪರಿವರ್ತಿಸಲಿಲ್ಲ. ಆಸ್ಟ್ರೇಲಿಯಾ ಆಕ್ರಣಕಾರಿ ಆಟಕ್ಕೆ ಗೋಲು ಕೀಪರ್ ಹಾಗೂ ನಾಯಕ ಶ್ರೀಜೇಶ್ ಅಷ್ಟೇ ಸಮರ್ಥವಾಗಿ ಉತ್ತರ ನೀಡಿದರು. 

24ನೇ ನಿಮಿಷದಲ್ಲಿ ಬ್ಲೇಕ್ ಗೋವರ್ಸ್ ಸಿಡಿಸಿದ ಗೋಲಿನಿಂದ ಆಸ್ಟ್ರೇಲಿಯಾ 1-0 ಮುುನ್ನಡೆ ಸಾಧಿಸಿತು. ಈ ಮೂಲಕ ಮೊದಲಾರ್ಧದಲ್ಲಿ ಆಸ್ಟ್ರೇಲಿಯಾ ಮುನ್ನಡೆ ಕಾಯ್ದುಕೊಂಡಿತು. ದ್ವಿತಿಯಾರ್ಧದಲ್ಲಿ ಭಾರತ ಕಮ್‌ಬ್ಯಾಕ್ ಮಾಡಿತು. 42ನೇ ನಿಮಿಷದಲ್ಲಿ ವಿವೇಕ್ ಪ್ರಸಾದ್ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಭಲಗೊಳಿಸಿದರು.  45ನೇ ನಿಮಿಷದಲ್ಲಿ ಭಾರತ ಆಕ್ರಮಣ ತಡೆದ ಆಸ್ಟ್ರೇಲಿಯಾ ಮುನ್ನಡೆಗೆ ಅವಕಾಶ ನೀಡಲಿಲ್ಲ. 

 

 

ಗೆಲುವಿಗಾಗಿ ಭಾರತ ಕಠಿಣ ಹೋರಾಟ ನಡೆಸಿತು. ಆದರೆ ಗೋಲು ದಾಖಲಾಗಲಿಲ್ಲ. ಪಂದ್ಯದ  ಅಂತಿಮ ನಿಮಿಷದವರೆಗೂ ಉಭಯ ತಂಡಗಳ ಹೋರಾಟ ಅಭಿಮಾನಿಗಳ ಒತ್ತಡ ಹೆಚ್ಚಿಸಿತು. ಆಧರೆ ಪಂದ್ಯ 1-1 ಅಂತರದಲ್ಲಿ ಸಮಭಲಗೊಂಡಿತು.

 

 

ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ನಡೆಸಲಾಯಿತು.  ಆಸ್ಟ್ರೇಲಿಯಾ 3 ಗೋಲು ಸಿಡಿಸದರೆ, ಭಾರತ 1 ಗೋಲು ಬಾರಿಸಿತು. ಹೀಗಾಗಿ ಆಸ್ಟ್ರೇಲಿಯಾ  ಆಸ್ಟ್ರೇಲಿಯಾ 3-1 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತದ ಹೋರಾಟ ವಿರೋಚಿತ ಸೋಲಿನೊಂದಿಗೆ ಅಂತ್ಯವಾಯಿತು.  ಈ ಮೂಲಕ ಅಂತಿಮ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಆಲಂಕರಿಸಿದರೆ, ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

 

 

loader