ದಶಕದ ನಂತರ ಮತ್ತೆ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ICC ಟೂರ್ನಿಯಲ್ಲಿ ಟ್ರೋಫಿಗಾಗಿ ಕಾದಾಡಲಿವೆ. ಎರಡೂ ತಂಡಕ್ಕೂ ಇದು ಪ್ರತಿಷ್ಠೆಯ ಪಂದ್ಯ. ಲೀಗ್​​​​​ನಲ್ಲಿ ಪಾಕ್​ಗಳ ಗರ್ವಭಂಗವಾಗಿತ್ತು. ಅದರ ಸೇಡು ತೀರಿಸಿಕೊಳ್ಳಲು ಪಾಕಿಗಳು ಎದುರು ನೋಡುತ್ತಿದ್ದರೆ ಟೀಂ ಇಂಡಿಯಾ ಮಾತ್ರ ಮತ್ತೆ ಪಾಕಿಸ್ತಾನದ ಬೆನ್ನು ಮೂಳೆ ಮುರಿಯಲು ರೆಡಿಯಾಗಿವೆ.

ದಶಕದ ನಂತರ ಮತ್ತೆ ಬದ್ಧವೈರಿಗಳಾದ ಭಾರತ ಮತ್ತು ಪಾಕಿಸ್ತಾನ ICC ಟೂರ್ನಿಯಲ್ಲಿ ಟ್ರೋಫಿಗಾಗಿ ಕಾದಾಡಲಿವೆ. ಎರಡೂ ತಂಡಕ್ಕೂ ಇದು ಪ್ರತಿಷ್ಠೆಯ ಪಂದ್ಯ. ಲೀಗ್​​​​​ನಲ್ಲಿ ಪಾಕ್​ಗಳ ಗರ್ವಭಂಗವಾಗಿತ್ತು. ಅದರ ಸೇಡು ತೀರಿಸಿಕೊಳ್ಳಲು ಪಾಕಿಗಳು ಎದುರು ನೋಡುತ್ತಿದ್ದರೆ ಟೀಂ ಇಂಡಿಯಾ ಮಾತ್ರ ಮತ್ತೆ ಪಾಕಿಸ್ತಾನದ ಬೆನ್ನು ಮೂಳೆ ಮುರಿಯಲು ರೆಡಿಯಾಗಿವೆ.

ನಿಜ ಹೇಳಬೇಕಂದ್ರೆ ಇಂತಹ ಒಂದು ಪಂದ್ಯಕ್ಕೆ ಭಾರತದ ಕ್ರಿಕೆಟ್​​​ ಅಭಿಮಾನಿಗಳು ದಶಕಗಳ ಕಾಲ ಕಾಯಬೇಕಾಯ್ತು. ಬದ್ಧ ವೈರಿಗಳ ವಿರುದ್ಧ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಗಾಗಿ ಕಾದು ಕುಳಿತಿದ್ದ ಟೀಂ ಇಂಡಿಯಾ, ಕ್ರಿಕೆಟ್​​​ ಪ್ರೇಮಿಗಳಿಗೆ ಕೊನೆಗೂ ಆ ಕ್ಷಣ ಉಣಬಡಿಸಲು ಸಜ್ಜಾಗಿದೆ. ಅದುವೇ ಭಾರತ- ಪಾಕ್​​​ ಫೈನಲ್​​​​​. ಮಹತ್ತರ ಟೂರ್ನಿಯಲ್ಲಿ ಟೀಂ ಇಂಡಿಯಾ ಮತ್ತು ಬದ್ಧ ವೈರಿ ಪಾಕಿಸ್ತಾನ ಟ್ರೋಫಿಗಾಗಿ ಕಾದಾಡಿ 10 ವರ್ಷಗಳೇ ಕಳೆದು ಹೋಗಿದ್ವು. 2007ರಲ್ಲಿ ಟಿ20 ವಿಶ್ವಕಪ್​ನ ಫೈನಲ್​​​ನಲ್ಲಿ ಮೊದಲ ಮತ್ತು ಕೊನೆಯ ಬಾರಿ ICC ಟೂರ್ನಿಯ ಫೈನಲ್​​​ನಲ್ಲಿ ಮುಖಮುಖಿಯಾಗಿದ್ದ ಇವರಿಬ್ಬರು, ಈಗ ಮತ್ತೆ ಫೈಟ್​​​ ನಡೆಸುವ ಮೂಲಕ ಎರಡೂ ದೇಶದಲ್ಲೂ ಕಿಚ್ಚು ಹಚ್ಚಿದ್ದಾರೆ.

ಪಂದ್ಯಕ್ಕೆ ಕೊಹ್ಲಿ ರಣತಂತ್ರ ಹೇಗಿರುತ್ತೆ..?

ಟೀಂ ಇಂಡಿಯಾದ ಬ್ಯಾಟಿಂಗ್ ಬಲಿಷ್ಠವಾಗಿದ್ದರೂ ಬೌಲಿಂಗ್​​​ ಸಾಕಷ್ಟು ಸುಧಾರಿಸಬೇಕಾಗಿದೆ. ಫ್ರಂಟ್​​​ ಲೈನ್​​ ಬೌಲರ್ಸ್​ ಇಡೀ ಟೂರ್ನಿಯಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕೊಹ್ಲಿ ಬೌಲಿಂಗ್​​​ನಲ್ಲಿ ಕೊಂಚ ಬದಲಾವಣೆ ಮಾಡಬೇಕಿದೆ. ಇನ್ನು ಫೀಲ್ಡಿಂಗ್ ಸುಧಾರಿಸಬೇಕಿದೆ. ಗ್ರೂಪ್ ಹಂತದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ ಹೀನಾಯವಾಗಿ ಸೋತಿತ್ತು​​. ನಂತರ ಪುಟಿದೆದ್ದು ಎದುರಾಳಿ ತಂಡಗಳನ್ನು ಪುಡಿಪುಡಿ ಮಾಡಿ ಈಗ ಫೈನಲ್'​ಗೇರಿರುವ ಪಾಕಿಸ್ತಾನ ಮೊದಲ ಪಂದ್ಯದ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ.

ಮಳೆರಾಯ ಅಬ್ಬರಿಸಿದ್ರೆ ಏನಾಗುತ್ತೆ.?

ಈ ಬಾರಿಯ ಚಾಂಪಿಯನ್ಸ್​​ ಟ್ರೋಫಿಯಲ್ಲಿ ಮಳೆರಾಯ ಎಷ್ಟು ಕಾಟ ಕೊಟ್ಟಿದ್ದ ಅನ್ನೋದು ಗೊತ್ತೆ ಇದೆ. ಹಾಗಾದ್ರೆ ಫೈನಲ್​ಗೆ ಮಳೆ ಅಡ್ಡಿಯಾಗಿ ಪಂದ್ಯ ರದ್ದಾದ್ರೆ ಕ್ರಿಕೆಟ್​​​ ಅಭಿಮಾನಿಗಳು ಚಿಂತಿಸುವ ಅಗತ್ಯವೇ ಇಲ್ಲ. ಯಾಕಂದ್ರೆ ಪಂದ್ಯ ಮುಂದೂಡಲಾಗುತ್ತೆ. ಒಟ್ಟಿನಲ್ಲಿ ಮದಗಜಗಳಂತೆ ಎರಡೂ ತಂಡಗಳು ಕಾದಾಡೋದು ಕನ್​​ಫರ್ಮ್​.. ಆಲ್ ದ ಬೆಸ್ಟ್ ಇಂಡಿಯಾ.