Asianet Suvarna News Asianet Suvarna News

ಪ್ರೇಮಿಗಳ ದಿನ ಚಮಿಂಡ ವಾಸ್ ಪಾಲಿಗೆ ಮರೆಯಲಾರದ ದಿನ: ಆದರೆ ಪ್ರೀತಿಗಲ್ಲ..!

ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್ ಟೂರ್ನಿಯ 10ನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತ್ತು. ವಾಸ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಮೊದಲ ಓವರ್’ನಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Chaminda Vaas takes hat trick in first over of the innings on valentines day
Author
Bengaluru, First Published Feb 14, 2019, 4:22 PM IST

ಬೆಂಗಳೂರು[ಫೆ.14]; ಚಮಿಂಡ ವಾಸ್ ಶ್ರೀಲಂಕಾ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಅದ್ಭುತ ಕ್ರಿಕೆಟಿಗ. ತಮ್ಮ ಕರಾರುವಕ್ಕಾದ ಯಾರ್ಕರ್ ಹಾಗೂ ಸ್ವಿಂಗ್ ಬೌಲಿಂಗ್’ಗೆ ಹೆಸರಾದ ವಾಸ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 750ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.

2019ರ ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಿದ ಶೇನ್ ವಾರ್ನ್!

ದಶಕಗಳ ಕಾಲ ಶ್ರೀಲಂಕಾದ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಚಮಿಂಡ ವಾಸ್ ತಮ್ಮ 14 ವರ್ಷಗಳ ವೃತ್ತಿಜೀವನದಲ್ಲಿ ಹಲವಾರು ಸ್ಮರಣೀಯ ಗೆಲುವುಗಳಿಗೆ ಸಾಕ್ಷಿಯಾಗಿದ್ದಾರೆ. ಅದರಲ್ಲೂ 14 ವರ್ಷಗಳ ವೃತ್ತಿಜೀವನದಲ್ಲಿ ಚಮಿಂಡ ವಾಸ್ ಪಾಲಿಗೆ ಪ್ರೇಮಿಗಳ ದಿನವಾದ ’ಫೆಬ್ರವರಿ 14’ ಎಂದೆಂದು ಮರೆಯಲಾರದ ಕ್ಷಣ. ಯಾಕೆಂದರೆ ಇಂದಿಗೆ ಸರಿಯಾಗಿ 16 ವರ್ಷಗಳ ಹಿಂದೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ತಾವೆಸೆದ ಮೊದಲ ಓವರ್’ನ ಮೂರು ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯ ಪಂದ್ಯದ ಮೊದಲ ಮೂರು ಎಸೆತಗಳಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನ್ನುವ ಅಪರೂಪದ ಕೀರ್ತಿಗೆ ಎಡಗೈ ವೇಗಿ ಭಾಜನರಾಗಿದ್ದರು. ವಾಸ್ ಕ್ರಮವಾಗಿ ಹನನ್ ಸರ್ಕಾರ್, ಮೊಹಮ್ಮದ್ ಅಶ್ರಫುಲ್ ಹಾಗೂ ಎಸ್ಹಾನುಲ್ ಹಕ್ ಬಲಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. 

ಏಕದಿನ ವಿಶ್ವಕಪ್’ಗೆ ಭಜ್ಜಿ ಆಯ್ಕೆ ಮಾಡಿದ ಟೀಂ ಇಂಡಿಯಾವಿದು

ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್ ಟೂರ್ನಿಯ 10ನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತ್ತು. ವಾಸ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಮೊದಲ ಓವರ್’ನಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಲೋಕ್ ಕಪಾಲಿ 32 ಅಲ್ಪ ಪ್ರತಿರೋಧದ ಹೊರತಾಗಿಯೂ ಕೇವಲ 124 ರನ್’ಗಳಿಗೆ ಸರ್ವಪತನ ಕಂಡಿತು. ಚಮಿಂಡ ವಾಸ್ 25 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು.

ಈ ಇಬ್ಬರು ಇದ್ದರೆ ಈ ಸಲ ವಿಶ್ವಕಪ್ ನಮ್ದೇ: ರಿಕಿ ಪಾಂಟಿಂಗ್

ಅಲ್ಪಗುರಿ ಬೆನ್ನಟ್ಟಿದ ಶ್ರೀಲಂಕ 10 ವಿಕೆಟ್’ಗಳ ಭರ್ಜರಿ ಜಯಬೇರಿ ಬಾರಿಸಿತ್ತು. 2003ರ ವಿಶ್ವಕಪ್ ಟೂರ್ನಿಯ ಫೈನಲ್’ನಲ್ಲಿ ಭಾರತ ತಂಡವನ್ನು ಮಣಿಸಿ ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 

2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 

Follow Us:
Download App:
  • android
  • ios