ಜೋಧ್‌ಪುರ್‌(ಫೆ.07): ‘ಕಾಫಿ ವಿತ್‌ ಕರಣ್‌’ ಟೀವಿ ಶೋನಲ್ಲಿ ಮಹಿಳಾ ಅವಹೇಳನ ನಡೆಸಿ ವಿವಾದಕ್ಕೆ ಸಿಲುಕಿದ್ದ ಭಾರತ ತಂಡದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌.ರಾಹುಲ್‌ಗೆ ಮತ್ತೊಂದು ಕಂಟಕ ಎದುರಾಗಿದೆ. ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ಕಾರ್ಯಕ್ರಮ ನಿರೂಪಕಕ ಕರಣ್ ಜೋಹರ್ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: ಬೇಷರತ್‌ ಕ್ಷಮೆಯಾಚಿಸಿದ ಹಾರ್ದಿಕ್‌ ಪಾಂಡ್ಯ, ರಾಹುಲ್‌

ಜೋಧಪುರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ನಿರ್ದೇಶನದಂತೆ ಇಲ್ಲಿನ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಲೂನಿ ಠಾಣಾಧಿಕಾರಿ ಬನ್ಸಿ ಲಾಲ್‌ ಬುಧವಾರ ಹೇಳಿದ್ದಾರೆ. ಸ್ಥಳೀಯ ನಿವಾಸಿ ಡಿ.ಆರ್‌. ಮೇಘ್ವಾಲ್‌, ‘ಕಾಫಿ ವಿತ್‌ ಕರಣ್‌’ ಕಾರ್ಯಕ್ರಮವನ್ನು ಹೆಚ್ಚು ಪ್ರಚಾರಗೊಳಿಸುವುದಕ್ಕಾಗಿಯೇ ನಿರೂಪಕ ಕರಣ್‌ ಜೋಹರ್‌, ಮಹಿಳೆಯರ ವಿರುದ್ಧ ಕೀಳು ಹೇಳಿಕೆಗಳನ್ನು ಹೊಂದಿರುವ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಿದ್ದಾರೆ’ ಎಂದು ದೂರು ನೀಡಿದ್ದರು.

ಇದನ್ನೂ ಓದಿ: ಪಾಂಡ್ಯ,ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವ್ರು ಇನ್ನೂ ತಂಡದಲ್ಲಿದ್ದಾರೆ:ಶ್ರೀಶಾಂತ್!

ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿದ ಕಾರಣ ಬಿಸಿಸಿಐ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್‌ಗೆ ಅಮಾನತು ಶಿಕ್ಷೆ ನೀಡಿತ್ತು. ಇಷ್ಟೇ ಅಲ್ಲ ಸಾಮಾಜಿ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಅಮಾನತು ಬಳಿಕ ಹಾರ್ದಿಕ್ ಟೀಂ ಇಂಡಿಯಾ ಸೇರಿಕೊಂಡರೆ, ರಾಹುಲ್ ಭಾರತ ಎ ತಂಡವನ್ನ ಪ್ರತಿನಿಧಿಸಿದರು.