Asianet Suvarna News Asianet Suvarna News

ವರ್ಕ್ ಆಯ್ತು ನಾಯಕ ಕೊಹ್ಲಿ-ಕೋಚ್ ಕುಂಬ್ಳೆ ಲೆಕ್ಕಚಾರ..! ಹಿಟ್ ಆಯ್ತು ಭುವಿ ಸ್ವಿಂಗ್ ಚಮತ್ಕಾರ..!

captain Kohli calculation work

ಕೊಲ್ಕತ್ತಾ(ಅ.02): ಟೀಮ್ ಇಂಡಿಯಾ 2ನೇ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯತ್ತ ಹೆಜ್ಜೆ ಇಡಲು ಕಾರಣವಾಗಿದ್ದು ಭುವನೇಶ್ವರ್​ ಕುಮಾರ್. ಮೊದಲ ಟೆಸ್ಟ್​ನಿಂದ ಡ್ರಾಪ್ ಆಗಿದ್ದ ಭುವಿ, ಸೆಕೆಂಡ್ ಟೆಸ್ಟ್​ನಲ್ಲಿ ಕಮಾಲ್ ಮಾಡಿದ್ದಾರೆ. ತಮ್ಮ ಸ್ವಿಂಗ್ ಬೌಲಿಂಗ್​ ಮೂಲಕ ಕಿವೀಸ್ ಬ್ಯಾಟ್ಸ್​​ಮನ್​ಗಳನ್ನ ಕಾಡಿದರು. 

ಭಾರತದ ಕ್ರಿಕೆಟ್ ಕಾಶಿ ಪಿಚ್ ಹೊಸದಾಗಿ ತಯಾರಾಗಿತ್ತು. ಹೀಗಾಗಿ ಇಲ್ಲಿ ಸ್ಪಿನ್ ಮ್ಯಾಜಿಕ್ ನಡೆಯೋದು ಕಮ್ಮಿ ಅಂತ ಹೇಳಲಾಗಿತ್ತು. ಫಾಸ್ಟ್ ಬೌಲರ್ಸ್ ಕಮಾಲ್ ಮಾಡ್ಬಹುದು ಅಂತ ಪಿಚ್ ಕ್ಯೂರೇಟರ್​ ಹೇಳಿದ್ದರು. ಅದರಂತೆ ಎರಡು ಟೀಮ್ ಪರ ವೇಗದ ಬೌಲರ್ಸ್ ಕಮಾಲ್ ಮಾಡಿದ್ರು. ಅದರಲ್ಲಿ ಯಶಸ್ವಿಯಾಗಿದ್ದು ಮಾತ್ರ ಭುವನೇಶ್ವರ್ ಕುಮಾರ್.

ಮೊದಲ ಟೆಸ್ಟ್​ನಿಂದ ಹೊರಗುಳಿದಿದ್ದ ಭುವನೇಶ್ವರ್​ಗೆ ಸೆಕೆಂಡ್ ಟೆಸ್ಟ್​​ನಲ್ಲಿ ಚಾನ್ಸ್ ನೀಡಲಾಗಿತ್ತು. ಯಾಕಂದರೆ ಕೋಲ್ಕತ್ತ ಪಿಚ್​ನಲ್ಲಿ ಸ್ವಿಂಗ್ ಮ್ಯಾಜಿಕ್​ ಮಾಡಬಹುದು ಅನ್ನೋದು ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ಕುಂಬ್ಳೆ ಲೆಕ್ಕಾಚಾರವಾಗಿತ್ತು. ಅದರಂತೆ ಭುವಿ ಅದ್ಭುತವಾಗಿ ದಾಳಿ ಮಾಡಿದರು. ಕಿವೀಸ್ ಬ್ಯಾಟ್ಸ್​ಮನ್​ಗಳು ಕ್ರೀಸ್ ಕಚ್ಚಿ ನಿಲ್ಲಲು ಭುವನೇಶ್ವರ್ ಬಿಡಲಿಲ್ಲ. ಆರಂಭದಲ್ಲೇ ಎರಡು ವಿಕೆಟ್ ಕಿತ್ತು ಶಾಕ್ ನೀಡಿದ್ರು. ಇಟ್ಟು  5 ವಿಕೆಟ್ ಕಬಳಿಸೋ ಮೂಲಕ ಕಿವೀಸ್ ಕುಸಿತಕ್ಕೆ ಕಾರಣರಾದರು. 

ವಿಂಡೀಸ್​ನಲ್ಲಿ ಸರಣಿ ಗೆಲ್ಲಿಸಿದ್ದ ಭುವಿ, ಕಿವೀಸ್ ಸರಣಿ ಗೆಲ್ಲಿಸಿಕೊಡ್ತಾರಾ..?

ವೆಸ್ಟ್ ಇಂಡೀಸ್ ವಿರುದ್ಧ 3ನೇ ಟೆಸ್ಟ್​​ ಗೆಲುವಿನ ರೂವಾರಿ ಭುವನೇಶ್ವರ್​. ಒಟ್ಟು 6 ವಿಕೆಟ್ ಕಬಳಿಸಿ, ಸರಣಿ ಗೆಲ್ಲಿಸಿಕೊಟ್ಟಿದ್ದರು. ಈಗ ಕೋಲ್ಕತ್ತ ಟೆಸ್ಟ್​ನಲ್ಲೂ  ಸ್ವಿಂಗ್ ಮ್ಯಾಜಿಕ್ ನಡೆಸಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ 250ನೇ ಟೆಸ್ಟ್ ಗೆಲ್ಲಿಸಿಕೊಡ್ತಾರಾ..? ಕೊಹ್ಲಿ ಆಶ್ಚರ್ಯ ರೀತಿಯಲ್ಲಿ ಟೀಮ್​ನಲ್ಲಿ ಸ್ಥಾನ ಕೊಟ್ಟು ಶಾಕ್ ನೀಡ್ತಾರೆ. ಸಿಕ್ಕ ಅವಕಾಶವನ್ನ ಸದ್ಭಳಕೆ ಮಾಡಿಕೊಳ್ತೀನಿ ಅಂತ ಭುವನೇಶ್ವವರ್ ಕುಮಾರ್ ಹೇಳಿಕೊಂಡಿದ್ದಾರೆ.

ಕ್ರಿಕೆಟ್​ನಲ್ಲಿ ಹೆಚ್ಚಾಗಿ ಫಾಸ್ಟ್ ಬೌಲರ್ಸ್​ ಗಾಯಾಳುವಾಗ್ತಾರೆ. ಹೀಗಾಗಿ ಕೋಚ್ ಮತ್ತು ಕ್ಯಾಪ್ಟನ್ ಮಾಸ್ಟರ್ ಪ್ಲಾನ್ ಮಾಡಿ ವೇಗದ ಬೌಲರ್​ಗಳಿಗೆ ರೋಟೆಶನ್ ಪಾಲಿಸಿ ಅನುಸರಿಸ್ತಿದ್ದಾರೆ. ಮೊದಲ ಟೆಸ್ಟ್​​​ನಲ್ಲಿ ಉಮೇಶ್ ಯಾದವ್ ಆಡಿದರು. ಸೆಕೆಂಡ್ ಟೆಸ್ಟ್​​ನಲ್ಲಿ ಯಾದವ್ ಬದಲು ಭುವಿ ಆಡ್ತಿದ್ದಾರೆ. ಇಶಾಂತ್ ಶರ್ಮಾ ಫಿಟ್ ಆದ್ರೆ 3ನೇ ಟೆಸ್ಟ್​​ನಲ್ಲಿ ಶಮಿ ಬದಲಿಗೆ ಆಡಲಿದ್ದಾರೆ. ಸುದೀರ್ಘ ಟೆಸ್ಟ್​ ಸರಣಿ ಇರುವುದರಿಂದ ವೇಗದ ಬೌಲರ್ಸ್ ಗಾಯಾಳುವಾಗಬಾದರು ಅನ್ನೋ ಕಾರಣಕ್ಕೆ ರೋಟೇಶನ್ ಪಾಲಿಸಿಯನ್ನ ಅನುಸರಿಸ್ತಿದ್ದಾರೆ.


 

Latest Videos
Follow Us:
Download App:
  • android
  • ios