ಟೀಂ ಇಂಡಿಯಾಗೆ ಕೊಹ್ಲಿ ಆಸರೆ; ಆಫ್ರಿಕಾಗೆ ಆರಂಭದಲ್ಲೇ ಶಾಕ್..!

First Published 15, Jan 2018, 5:29 PM IST
Bumrah strikes early after India 307
Highlights

ಮೂರನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಮನಮೋಹಕ ಇನಿಂಗ್ಸ್ ಕಟ್ಟಿದ್ದರು. ಟೆಸ್ಟ್ ಕ್ರಿಕೆಟ್'ನಲ್ಲಿ 21ನೇ ಶತಕ ಬಾರಿಸಿದ ವಿರಾಟ್'ಗೆ ಅಶ್ವಿನ್ ತಕ್ಕ ಸಾಥ್ ನೀಡಿದರು.

ಸೆಂಚೂರಿಯನ್(ಜ.15): ವಿರಾಟ್ ಕೊಹ್ಲಿಯ ಆಕರ್ಷಕ ಬ್ಯಾಟಿಂಗ್ ಮತ್ತೊಮ್ಮೆ ಟೀಂ ಇಂಡಿಯಾಗೆ ನೆರವಾಯಿತು. ಬಹುತೇಕ ಮೊದಲ ಇನಿಂಗ್ಸ್'ನಲ್ಲಿ ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ ಟೀಂ ಇಂಡಿಯಾಗೆ ಆಸರೆಯಾದರು. ಟೀಂ ಇಂಡಿಯಾ 307 ರನ್'ಗಳಿಗೆ ಆಲೌಟ್ ಆದರೆ, ಇದರಲ್ಲಿ ಅರ್ಧದಷ್ಟು ಮೊತ್ತ ಕಲೆಹಾಕಿದ್ದು ನಾಯಕ ವಿರಾಟ್ ಕೊಹ್ಲಿ..! ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾಗೆ ಬುಮ್ರಾ 2 ವಿಕೆಟ್ ಕಬಳಿಸುವ ಮೂಲಕ ಆರಂಭದಲ್ಲೇ ಶಾಕ್ ನೀಡಿದ್ದಾರೆ.

ಮೂರನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಮನಮೋಹಕ ಇನಿಂಗ್ಸ್ ಕಟ್ಟಿದ್ದರು. ಟೆಸ್ಟ್ ಕ್ರಿಕೆಟ್'ನಲ್ಲಿ 21ನೇ ಶತಕ ಬಾರಿಸಿದ ವಿರಾಟ್'ಗೆ ಅಶ್ವಿನ್ ತಕ್ಕ ಸಾಥ್ ನೀಡಿದರು. ಅಶ್ವಿನ್-ವಿರಾಟ್ ಕೊಹ್ಲಿ 71 ರನ್'ಗಳ ಜತೆಯಾಟವಾಡಿ ತಂಡಕ್ಕೆ ನೆರವಾಯಿತು. ಅಶ್ವಿನ್(38) ಔಟ್ ಆದ ಬಳಿಕ ಶಮಿ ಕೂಡಾ ಪೆವಿಲಿಯನ್ ಸೇರಿದರು. ಆನಂತರ ಚುರುಕಿನ ಆಟವಾಡಿದ ವಿರಾಟ್ 153 ರನ್ ಬಾರಿಸಿ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು.

ಆಫ್ರಿಕಾ ಪರ ಮಾರ್ನೆ ಮಾರ್ಕೆಲ್ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಇನ್ನು ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಎರಡನೇ ಓವರ್'ನಲ್ಲೇ ಮಾರ್ಕ್'ರಮ್ ವಿಕೆಟ್ ಕಬಳಿಸಿದ ಬುಮ್ರಾ, ಆರನೇ ಓವರ್'ನಲ್ಲಿ ಹಾಶೀಂ ಆಮ್ಲಾರನ್ನು ಎಲ್'ಬಿ ಬಲೆಗೆ ಕೆಡುವುವಲ್ಲಿ ಯಶಸ್ವಿಯಾದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 335/10 ಎರಡನೇ ಇನಿಂಗ್ಸ್: 3/2

ಭಾರತ: 307/10

ವಿರಾಟ್ ಕೊಹ್ಲಿ: 153

ಮಾರ್ನೆ ಮಾರ್ಕೆಲ್ : 60/4

(*ವಿವರ ಅಪೂರ್ಣ)

loader