ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲೆ ಹೊಂದಿರುವ ಲಾರಾ, ‘ಟಿ20 ಕ್ರಿಕೆಟ್ ಕೇವಲ 3 ತಾಸಿನ ಪಂದ್ಯವಾಗಿದ್ದು, ಒಲಿಂಪಿಕ್ಸ್‌ನಲ್ಲಿ ಯಾಕೆ ಸೇರಿಸುತ್ತಿಲ್ಲ ಎಂದು ತಿಳಿಯುತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡುವುದಕ್ಕೆ ಖುಷಿ ಎನಿಸುತ್ತದೆ ಎಂದಿದ್ದಾರೆ. 

ಕಿಂಗ್ಸ್‌ಟನ್[ಸೆ.08]: ಟಿ20 ಕ್ರಿಕೆಟ್‌ಗೆ ಬೆಂಬಲ ಸೂಚಿಸಿರುವ ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ, ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್ ನೋಡುವುದಕ್ಕೆ ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ದಾಖಲೆ ಹೊಂದಿರುವ ಲಾರಾ, ‘ಟಿ20 ಕ್ರಿಕೆಟ್ ಕೇವಲ 3 ತಾಸಿನ ಪಂದ್ಯವಾಗಿದ್ದು, ಒಲಿಂಪಿಕ್ಸ್‌ನಲ್ಲಿ ಯಾಕೆ ಸೇರಿಸುತ್ತಿಲ್ಲ ಎಂದು ತಿಳಿಯುತ್ತಿಲ್ಲ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ನೋಡುವುದಕ್ಕೆ ಖುಷಿ ಎನಿಸುತ್ತದೆ ಎಂದಿದ್ದಾರೆ. 

ವಿಶ್ವಾದ್ಯಂತ ಟಿ20 ಕ್ರಿಕೆಟ್ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ವಿಶ್ವದಲ್ಲಿ 16 ಟಿ20 ತಂಡಗಳಿದ್ದರೆ, ಕೇವಲ 10 ಏಕದಿನ ತಂಡಗಳಿವೆ. ಜತೆಗೆ ಒಲಿಂಪಿಕ್ಸ್‌ನಲ್ಲಿ ಗಾಲ್ಫ್‌ಗೆ ಮತ್ತೊಮ್ಮೆ ಅವಕಾಶ ದೊರೆತಿದೆ. ಈಗ ಟಿ20 ಕ್ರಿಕೆಟ್ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸುವುದಕ್ಕೆ ಸಕಾಲವಾಗಿದೆ’ ಎಂದು ಲಾರಾ ಹೇಳಿದ್ದಾರೆ.