ಹೈಜಂಪ್'ನಲ್ಲಿ 2.32 ಮೀಟರ್ ಎತ್ತರ ಜಿಗಿಯುವ ಮೂಲಕ ಬ್ರೆಂಡನ್ ಚಿನ್ನದ ಪದಕ ಗೆದ್ದುಕೊಂಡರು. ಗ್ಲಾಸ್ಗೋ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ 8ನೇ ಸ್ಥಾನ ಪಡೆದಿದ್ದ ಬ್ರೆಂಡನ್, ರಿಯೋ ಒಲಿಂಪಿಕ್ಸ್'ನಲ್ಲಿ 15ನೇ ಸ್ಥಾನ ಪಡೆದಿದ್ದರು. ಆದರೆ ತವರಿನಲ್ಲಿ ಇಂದು ಅದ್ಭುತ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಗೋಲ್ಡ್'ಕೋಸ್ಟ್(ಏ.12): ಆಸೀಸ್ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕಿರಿಯ ಸಹೋದರ ಬ್ರೆಂಡನ್ ಸ್ಟಾರ್ಕ್ ಕಾಮನ್'ವೆಲ್ತ್ ಗೇಮ್ಸ್'ನ ಹೈಜಂಪ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಹೈಜಂಪ್'ನಲ್ಲಿ 2.32 ಮೀಟರ್ ಎತ್ತರ ಜಿಗಿಯುವ ಮೂಲಕ ಬ್ರೆಂಡನ್ ಚಿನ್ನದ ಪದಕ ಗೆದ್ದುಕೊಂಡರು. ಗ್ಲಾಸ್ಗೋ ಕಾಮನ್'ವೆಲ್ತ್ ಗೇಮ್ಸ್'ನಲ್ಲಿ 8ನೇ ಸ್ಥಾನ ಪಡೆದಿದ್ದ ಬ್ರೆಂಡನ್, ರಿಯೋ ಒಲಿಂಪಿಕ್ಸ್'ನಲ್ಲಿ 15ನೇ ಸ್ಥಾನ ಪಡೆದಿದ್ದರು. ಆದರೆ ತವರಿನಲ್ಲಿ ಇಂದು ಅದ್ಭುತ ಪ್ರದರ್ಶನ ತೋರುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಬ್ರೆಂಡನ್ ಮಿಚೆಲ್ ಸಾಧನೆಯನ್ನು ಸಹೋದರೆ ಮಿಚೆಲ್ ಸ್ಟಾರ್ಕ್ ಹಾಗೂ ಐಸಿಸಿ ಬಣ್ಣಿಸಿದ್ದು ಹೀಗೆ..