ಐಪಿಎಲ್ ಬ್ರಾಂಡ್ ಮೌಲ್ಯ 43 ಸಾವಿರ ಕೋಟಿ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Aug 2018, 11:57 AM IST
Brand IPL now soars to 43 thousand crores
Highlights

ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಟೂರ್ನಿಯ ಬ್ರಾಂಡ್ ಮೌಲ್ಯ ಬಹಿರಂಗವಾಗಿದೆ. ಕಳೆದ ಆವೃತ್ತಿಗಿಂತ 11ನೇ ಆವೃತ್ತಿ ಐಪಿಎಲ್ ಟೂರ್ನಿ ಬ್ರ್ಯಾಂಡ್ ವ್ಯಾಲ್ಯೂ ಶೇಕಡಾ 19 ರಷ್ಟು ಏರಿಕೆಯಾಗಿದೆ. ಇಲ್ಲಿದೆ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ವಿವರ.

ನವದೆಹಲಿ(ಆ.09): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಆವೃತ್ತಿಯಿಂದ ಆವೃತ್ತಿಗೆ ಜನಪ್ರಿಯಗೊಳ್ಳುತ್ತಲೇ ಇದೆ. ವಿಶ್ವದ ಶ್ರೀಮಂತ  ಕ್ರಿಕೆಟ್ ಲೀಗ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿರೋ ಐಪಿಎಲ್ ಬ್ರ್ಯಾಂಡ್ ಮೌಲ್ಯ ಬರೋಬ್ಬರಿ 43 ಸಾವಿರ ಕೋಟಿಯಾಗಿದೆ.

ಪ್ರತಿ ವರ್ಷ ವೀಕ್ಷಕರ ಸಂಖ್ಯೆಲ್ಲೂ ಗಣನೀಯ ಏರಿಕೆ ಕಾಣುತ್ತಿರುವ ಐಪಿಎಲ್ ಟೂರ್ನಿ, ಇದೀಗ ಗರಿಷ್ಠ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ಕ್ರಿಕೆಟ್ ಲೀಗ್ ಅನ್ನೋ ದಾಖಲೆ ಬರೆದಿದೆ. ಡಫ್ ಹಾಗೂ ಫೆಲ್ಪ್ಸ್ ಎನ್ನುವ ಜಾಗತಿಕ ಮೌಲ್ಯಮಾಪನ ಹಾಗೂ ಕಾರ್ಪೋರೇಟ್ ಹಣಕಾಸು ಸಲಹಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ ಬಯಲಾಗಿದೆ.

ಡಫ್ ಹಾಗೂ ಫೆಲ್ಪ್ಸ್ ಪ್ರಕಟಿಸಿರುವ ವರದಿ ಪ್ರಕಾರ, 2018ರಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ ₹43 ಸಾವಿರ ಕೋಟಿ (6.3 ಬಿಲಿಯನ್ ಡಾಲರ್)ಗೆ ಏರಿಕೆಯಾಗಿದೆ. 2017ರಲ್ಲಿ ತಂಡದ ಬ್ರಾಂಡ್ ಮೌಲ್ಯ ₹36 ಸಾವಿರ ಕೋಟಿ ಇತ್ತು. ಇದೇ ವೇಳೆ ಮುಂಬೈ ಇಂಡಿಯನ್ಸ್ ಅತಿಹೆಚ್ಚು ಬ್ರಾಂಡ್ ಮೌಲ್ಯ ಹೊಂದಿರುವ ತಂಡ (₹775 ಕೋಟಿ) ಎನಿಸಿಕೊಂಡಿದೆ.

loader