60 ಕೆ.ಜಿ. ಲೈಟ್‌ವೇಟ್ ವಿಭಾಗದಲ್ಲಿ ಶಿವ ಥಾಪ ಸರ್ವೀಸಸ್‌ನ ಮನೀಶ್ ವಿರುದ್ಧ 4-1ರಿಂದ ಜಯ ಪಡೆದರೆ, 53 ಕೆ.ಜಿ. ವಿಭಾಗದ ಬೌಟ್‌'ನಲ್ಲಿ ಉತ್ತರಾಖಂಡ್‌'ನ ಅರವಿಂದ್ ಎದುರು ದೇವೇಂದ್ರೊ 5-1 ಅಂತರದ ಗೆಲುವು ಪಡೆದರು.

ಗುವಾಹತಿ(ಡಿ.10): ವಿಶ್ವ ಚಾಂಪಿಯನ್‌'ಶಿಪ್'ನಲ್ಲಿ ಕಂಚು ಪದಕ ವಿಜೇತ ಶಿವಥಾಪ ಹಾಗೂ ಏಷ್ಯಾ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದಿದ್ದ ದೇವೇಂದ್ರೊ ಸಿಂಗ್ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌'ಶಿಪ್‌ನಲ್ಲಿ ಕ್ವಾರ್ಟರ್‌'ಫೈನಲ್‌ಗೆ ಧಾವಿಸಿದ್ದಾರೆ.

60 ಕೆ.ಜಿ. ಲೈಟ್‌ವೇಟ್ ವಿಭಾಗದಲ್ಲಿ ಶಿವ ಥಾಪ ಸರ್ವೀಸಸ್‌ನ ಮನೀಶ್ ವಿರುದ್ಧ 4-1ರಿಂದ ಜಯ ಪಡೆದರೆ, 53 ಕೆ.ಜಿ. ವಿಭಾಗದ ಬೌಟ್‌'ನಲ್ಲಿ ಉತ್ತರಾಖಂಡ್‌'ನ ಅರವಿಂದ್ ಎದುರು ದೇವೇಂದ್ರೊ 5-1 ಅಂತರದ ಗೆಲುವು ಪಡೆದರು.

ಇನ್ನು ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಮನೋಜ್ ಕುಮಾರ್ (69 ಕೆ.ಜಿ.) ಮತ್ತು ಏಷ್ಯಾ ಗೇಮ್ಸ್ ಬೆಳ್ಳಿ ಪದಕ ವಿಜೇತ ದಿನೇಶ್ ಕುಮಾರ್ (91 ಕೆ.ಜಿ.) ಕೂಡ ಪ್ರಿಕ್ವಾರ್ಟರ್‌'ಫೈನಲ್‌ನಲ್ಲಿ ಗೆಲುವು ಸಾಧಿಸಿ ಮುನ್ನಡೆ ಪಡೆದರು.