ಸದಾ ವಿವಾದದ ಕೇಂದ್ರಬಿಂದು ವಾಗಿರುತ್ತಿದ್ದ ಬ್ರಿಟಿಷ್ ವೃತ್ತಿಪರ ಬಾಕ್ಸಿರ್ ಆಮೀರ್ ಇಕ್ಬಾಲ್ ಖಾನ್, ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಲಂಡನ್ (ಜ.18): ಸದಾ ವಿವಾದದ ಕೇಂದ್ರಬಿಂದು ವಾಗಿರುತ್ತಿದ್ದ ಬ್ರಿಟಿಷ್ ವೃತ್ತಿಪರ ಬಾಕ್ಸರ್ ಆಮೀರ್ ಇಕ್ಬಾಲ್ ಖಾನ್, ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
2010 ರ ವೇಳೆ ಅರಿಜೋನಾದಲ್ಲಿ ಬಾಕ್ಸರ್ ಆಮೀರ್, ಅಮೆರಿಕದ ಮಹಿಳಾಯೊಂದಿಗೆ ಅಸಭ್ಯ ನರ್ತನದಲ್ಲಿ ಭಾಗವಹಿಸಿದ್ದ ದೃಶ್ಯಾವಳಿಯ ತುಣುಕೊಂದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋವನ್ನೆ ಹೋಲುವ ಮೂರು ಇತರೆ ದೃಶ್ಯಾವಳಿಗಳನ್ನು ವಿಶ್ವ ಚಾಂಪಿಯನ್ ಬಾಕ್ಸರ್ ಆಮೀರ್ ಅದೇ ವೆಬ್‌ಸೈಟ್‌ಗೆ ಮಾರಾಟ ಮಾಡಿದ್ದಾರೆ. ಆನಂತರ ೨೦೧೩ರಲ್ಲಿ ಆಮೀರ್, ಫರ‌್ಯಾಲ್ ಮಕ್ಡೋಮ್ ಅವರನ್ನು ಅದ್ದೂರಿಯಾಗಿ ವಿವಾಹವಾಗಿದ್ದರು. ಆಮೀರ್ ಅವರ ದೃಶ್ಯಾವಳಿ ಈಗ ಮತ್ತೊಮ್ಮೆ ಸುದ್ದಿಯಾಗಿರುವುದರಿಂದ ಫರ‌್ಯಾಲ್ ವಿಚ್ಛೇಧನ ಪಡೆಯಲಿದ್ದಾರೆ ಎಂದು ಅವರ ತಾಯಿ ಜಿಯಾ ಮಕ್ಡೋಮ್ ಹೇಳಿದ್ದಾರೆ ಎಂದು ಸ್ಪೋರ್ಟ್ಸ್‌ಕಿಡಾ ವರದಿ ಮಾಡಿದೆ.
