8 ಬಾರಿ ಓಲಿಂಪಿಕ್ಸ್ ಚಾಂಪಿಯನ್ ಆಗಿರುವ ಬೋಲ್ಟ್ ಇದೀಗ ಫುಟ್ಬಾಲ್'ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಕಿಂಗ್ಸ್‌'ಟನ್(ಅ.22): ವಿಶ್ವದ ವೇಗದ ಮಾನವ ಉಸೇನ್ ಬೋಲ್ಟ್, ಅಥ್ಲೆಟಿಕ್ಸ್‌'ನಿಂದ ನಿವೃತ್ತಿ ಪಡೆದ ಬಳಿಕ ಫುಟ್ಬಾಲ್‌'ನಲ್ಲಿ ವೃತ್ತಿಬದುಕು ಆರಂಭಿಸಲು ಚಿಂತನೆ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

2018ರಲ್ಲಿ ಫುಟ್ಬಾಲ್‌'ಗೆ ಕಾಲಿಡಲು ಸಿದ್ಧತೆ ನಡೆಸಿರುವುದಾಗಿ ತಿಳಿಸಿರುವ ಅವರು, ‘ಫುಟ್ಬಾಲ್ ಎಂದರೆ ನನಗೆ ಬಹಳ ಪ್ರೀತಿ. ಈಗಾಗಲೇ ಹಲವು ಕ್ಲಬ್‌'ಗಳು ನನ್ನನ್ನು ಸಂಪರ್ಕಿಸಿವೆ. ಗಾಯಗೊಂಡಿದ್ದರಿಂದ ಫುಟ್ಬಾಲ್‌'ಗೆ ಕಾಲಿಡುವ ಕನಸನ್ನೂ ಮುಂದೂಡಬೇಕಾಯಿತು. 2018ರಲ್ಲಿ ಆಡುವ ವಿಶ್ವಾಸವಿದೆ’ ಎಂದು ಬೋಲ್ಟ್ ಫಿಫಾ ವೆಬ್‌'ಸೈಟ್‌'ಗೆ ತಿಳಿಸಿದ್ದಾರೆ.

8 ಬಾರಿ ಓಲಿಂಪಿಕ್ಸ್ ಚಾಂಪಿಯನ್ ಆಗಿರುವ ಬೋಲ್ಟ್ ಇದೀಗ ಫುಟ್ಬಾಲ್'ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.