ಇಮ್ರಾನ್ ಖಾನ್ ಕಲರ್’ಫುಲ್ ಕಹಾನಿ: ಖಾನ್ ಖಾಸಗಿ ಬದುಕು ಅನಾವರಣ..!
10 ತಿಂಗಳು ಇಮ್ರಾನ್ ಖಾನ್ ಜೊತೆ ಸಂಸಾರ ನಡೆಸಿದ್ದ 2ನೇ ಪತ್ನಿ ರೆಹಾಂ ಖಾನ್, ಪಾಕಿಸ್ತಾನ ಹಾಗೂ ಲಂಡನ್ನಿನ ಪ್ರಸಿದ್ಧ ಟೀವಿ ಆ್ಯಂಕರ್. ಲಿಬಿಯಾ ಮೂಲದ ರೆಹಾಂ, ಇಮ್ರಾನ್ ಖಾನ್’ರನ್ನು ಮದುವೆಯಾಗಿ, ವಿಚ್ಛೇದನ ಪಡೆದ ನಂತರ ಇಮ್ರಾನ್’ಗೆ ಬದ್ಧ ವೈರಿಯಾಗಿಬಿಟ್ಟಿದ್ದಾರೆ. ಇದೀಗ ರೆಹಾಂ ಆತ್ಮಕತೆ ಬರೆದಿದ್ದಾರೆ. ಅದರಲ್ಲಿ ಇಮ್ರಾನ್ ಬಗ್ಗೆ ಅತ್ಯಂತ ರಹಸ್ಯ ಹಾಗೂ ಸ್ಫೋಟಕ ಎನ್ನಬಹುದಾದ ವಿಷಯಗಳಿವೆ.
10 ತಿಂಗಳು ಇಮ್ರಾನ್ ಖಾನ್ ಜೊತೆ ಸಂಸಾರ ನಡೆಸಿದ್ದ 2ನೇ ಪತ್ನಿ ರೆಹಾಂ ಖಾನ್, ಪಾಕಿಸ್ತಾನ ಹಾಗೂ ಲಂಡನ್ನಿನ ಪ್ರಸಿದ್ಧ ಟೀವಿ ಆ್ಯಂಕರ್. ಲಿಬಿಯಾ ಮೂಲದ ರೆಹಾಂ, ಇಮ್ರಾನ್ ಖಾನ್’ರನ್ನು ಮದುವೆಯಾಗಿ, ವಿಚ್ಛೇದನ ಪಡೆದ ನಂತರ ಇಮ್ರಾನ್’ಗೆ ಬದ್ಧ ವೈರಿಯಾಗಿಬಿಟ್ಟಿದ್ದಾರೆ. ಇದೀಗ ರೆಹಾಂ ಆತ್ಮಕತೆ ಬರೆದಿದ್ದಾರೆ. ಅದರಲ್ಲಿ ಇಮ್ರಾನ್ ಬಗ್ಗೆ ಅತ್ಯಂತ ರಹಸ್ಯ ಹಾಗೂ ಸ್ಫೋಟಕ ಎನ್ನಬಹುದಾದ ವಿಷಯಗಳಿವೆ.
ಬಾಲಿವುಡ್ ಬೆಡಗಿಯ ಜೊತೆ
70ರ ದಶಕದ ಭಾರತದ ಬಾಲಿವುಡ್ ಸೂಪರ್‌ಸ್ಟಾರ್ ಜೊತೆ ಇಮ್ರಾನ್‌ಗೆ ಸಂಬಂಧವಿತ್ತು. ಆಕೆ ಸಾರ್ವಕಾಲಿಕ ಸುಂದರಿಯರಲ್ಲಿ ಒಬ್ಬಳು. ನಾನು ಇವರಿಬ್ಬರ ಕತೆಗಳನ್ನು ಕೇಳುತ್ತ ಬೆಳೆದವಳು. ನಂತರ ಅವು ನಿಜ ಅಂತ ಸ್ವತಃ ಇಮ್ರಾನ್ ಹೇಳಿದರು. ನಟಿಯರ ಜೊತೆ ಸಂಬಂಧ ಹೊಂದಿದ್ದರೂ ಇಮ್ರಾನ್ ಹಾಗೂ ಅವರ ಕುಟುಂಬದವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ.
ಒಮ್ಮೆ ಪತ್ರಕರ್ತರೊಬ್ಬರು ಇಮ್ರಾನ್‌ರ ತಾಯಿಗೆ ಫೋನ್ ಮಾಡಿ ಆ ಸಂಬಂಧದ ಬಗ್ಗೆ ಕೇಳಿದ್ದರು. ಅದಕ್ಕೆ ತಾಯಿ, ‘ನನ್ನ ಮಗ ಯಾವತ್ತೂ ವೇಶ್ಯೆಯನ್ನು ಮದುವೆಯಾಗುವುದಿಲ್ಲ’ ಎಂದು ಹೇಳಿ ಫೋನ್ ಕುಕ್ಕಿದ್ದರಂತೆ. ಇಮ್ರಾನ್ ಆ ನಟಿಯನ್ನು ಬಾಂಬೆಯಲ್ಲಿ ಭೇಟಿಯಾಗಿ, ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದರಂತೆ. ನಂತರ ಮರೆತುಬಿಟ್ಟರಂತೆ. ಆದರೆ, ಆಕೆ ಇವರ ಬೆನ್ನುಹತ್ತಿ ಲಂಡನ್ನಿಗೂ ಬಂದಿದ್ದಳಂತೆ. ಹಾಗಂತ ನನಗೆ ಇಮ್ರಾನ್ ಹೇಳಿದ್ದರು. ಈ ಬಗ್ಗೆ ನಾನೊಬ್ಬರು ಚಿತ್ರ ನಿರ್ಮಾಪಕರ ಬಳಿ ಕೇಳಿದ್ದೆ. ಅವರು, ಇಮ್ರಾನ್ ಖಾನ್ ಅವರೇ ಆಕೆಯ ಬೆನ್ನಿಗೆ ಬಿದ್ದಿದ್ದರು ಎಂದು ಹೇಳಿದರು. ಅಲ್ಲದೆ ಆ ನಟಿ ಇಮ್ರಾನ್ ಖಾನ್ ಬಗ್ಗೆ ಅವರ ಬಳಿ ‘ಕೀರ್ತಿ ದೊಡ್ಡದು ಮೂರ್ತಿ ಚಿಕ್ಕದು’ ಎಂದು ಹೇಳಿದ್ದಳಂತೆ.
ಬಿಬಿಸಿಯ ‘ವೆದರ್ ಗರ್ಲ್’
ಸುಂದರ ಲಿಬಿಯಾದ ಸಂತೋಷಕರ ಕುಟುಂಬದಲ್ಲಿ ಹುಟ್ಟಿದವಳು ನಾನು. ಅಪ್ಪ ಇಎನ್‌ಟಿ ಸರ್ಜನ್. 1970ರ ದಶಕದಲ್ಲಿ ಪ್ಲಾಸ್ಟಿಕ್ ಸರ್ಜನ್ನಾಗಿ ವೃತ್ತಿಬದುಕು ಕಟ್ಟಿಕೊಳ್ಳಲು ಅವರು ಬ್ರಿಟನ್ನಿಗೆ ಬಂದರು. ನಾನು ಬ್ರಿಟನ್ನಿನಲ್ಲೇ ಸಂಪ್ರದಾಯಸ್ಥ ಮುಸ್ಲಿಂ ಹಾಗೂ ಆಧುನಿಕ ಬ್ರಿಟಿಷ್ ಯುವತಿಯಾಗಿ ಬೆಳೆದೆ. ನಂತರ ಇಜಾಜ್ ರೆಹಮಾನ್ ಎಂಬಾತನ ಜೊತೆ ಮದುವೆಯಾಯಿತು. ಮೂವರು ಮಕ್ಕಳಾದರು. ಆದರೆ, ಮಾನಸಿಕ ರೋಗಿಯಂತಿದ್ದ ಆ ವಿಕ್ಷಿಪ್ತ ವ್ಯಕ್ತಿಗೆ ವಿಚ್ಛೇದನ ನೀಡಬೇಕಾಯಿತು. ಅಷ್ಟರಲ್ಲಾಗಲೇ ನಾನು ಬಿಬಿಸಿ ಚಾನಲ್‌ನ ಆ್ಯಂಕರ್ ಆಗಿದ್ದೆ.
ಅಲ್ಲಿ ‘ಹವಾಮಾನದ ಹುಡುಗಿ’ಎಂದು ಬಹಳ ಫೇಮಸ್ ಆಗಿದ್ದೆ. ಆದರೆ, ಮಕ್ಕಳನ್ನು ಸಾಕುತ್ತಾ ಪತ್ರಕರ್ತೆಯಾಗಿ ಕೆಲಸ ಮಾಡುವುದು ಕಷ್ಟವಾಗಿತ್ತು. 2012ರಲ್ಲಿ ನನ್ನ ಅದೃಷ್ಟ ಖುಲಾಯಿಸಿತು. ಪಾಕಿಸ್ತಾನದ ಟೀವಿ ಚಾನಲ್ಲೊಂದು ಭಾರಿ ಸಂಬಳ ನೀಡಿ ನನ್ನನ್ನು ಕರೆಸಿಕೊಂಡಿತು. ಆ ಚಾನಲ್ಲಿನಲ್ಲಿ ನನ್ನ ಶೋ ಜನಪ್ರಿಯವಾಯಿತು. ಕ್ರಮೇಣ ಪಾಕಿಸ್ತಾನದ ರಾಜಕೀಯ, ಅಸ್ಥಿರತೆ, ಭ್ರಷ್ಟಾಚಾರ, ಭಯೋತ್ಪಾದನೆಯಿಂದ ಹಿಡಿದು ಎಲ್ಲಾ ಮುಖಗಳೂ ನನಗೆ ಪರಿಚಯವಾದವು. ಜೊತೆಗೆ ಇಮ್ರಾನ್ ಖಾನ್ ಕೂಡ!
ಪಾಕಿಸ್ತಾನಕ್ಕೆ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ಇಮ್ರಾನ್ ಖಾನ್ ಆಗ ರಾಜಕೀಯದಲ್ಲಿ ಮಿಂಚುತ್ತಿದ್ದರು. ನನ್ನ-ಅವರ ಭೇಟಿ ಹೆಚ್ಚಾಯಿತು. ನಾನೇನೂ ಅವರಿಗೆ ಮರುಳಾಗಿರಲಿಲ್ಲ. ಅಥವಾ ಅವರಲ್ಲಿ ನನಗೆ ಮಹಾನ್ ಪ್ರೀತಿಯೂ ಹುಟ್ಟಿರಲಿಲ್ಲ. ಆದರೆ, ಪಾಕಿಸ್ತಾನದ ರಾಜಕೀಯದಲ್ಲಿ ಬದಲಾವಣೆಯ ಹರಿಕಾರನಾಗುತ್ತೇನೆ ಎಂಬ ಅವರ ಆತ್ಮವಿಶ್ವಾಸದ ಮಾತುಗಳಲ್ಲಿ ನಂಬಿಕೆ ಹುಟ್ಟಿತ್ತು. ಅದು ಮದುವೆಯವರೆಗೂ ನನ್ನನ್ನು ಕರೆದೊಯ್ದಿತು. ನನ್ನ ಬದುಕಿನಲ್ಲಿ ಘಟಿಸಿದ ದೊಡ್ಡ ದುರಂತವದು.
ನಾನೇಕೆ ಅವರನ್ನು ಬಿಟ್ಟೆ?
ನನ್ನ ಹಾಗೂ ಇಮ್ರಾನ್ ಖಾನ್‌ರ ಮದುವೆ ಒಂದು ವರ್ಷವೂ ಬಾಳಲಿಲ್ಲ. ಅಷ್ಟರಲ್ಲೇ ನನಗೆ ಅವರ ಎಲ್ಲಾ ಮುಖಗಳೂ ಪರಿಚಯವಾದವು. ಅವರೊಬ್ಬ ವಿಕ್ಷಿಪ್ತ ವ್ಯಕ್ತಿ. ವಿಕೃತ ಕಾಮಿ, ಸಲಿಂಗ ಕಾಮಿಯೂ ಹೌದು. ಅನೇಕ ಪತ್ರಕರ್ತೆಯರ ಜೊತೆಗೆ ಅವರಿಗೆ ಸಂಬಂಧವಿತ್ತು. ಅವರಿಗೆಲ್ಲ ಪ್ರತಿ ತಿಂಗಳೂ ಇಂತಿಷ್ಟು ಹಣ ಎಂದು ಸಂಬಳದಂತೆ ಕಳಿಸುತ್ತಿದ್ದರು. ಇಮ್ರಾನ್‌ಗೆ ಸೆಕ್ಸ್‌ಟಿಂಗ್ ಮಾಡುವ ಚಟ. ಹುಡುಗಿಯರ ಜೊತೆ ಅಶ್ಲೀಲ ಚಾಟ್ ಮಾಡುತ್ತ, ದೇಹದ ಖಾಸಗಿ ಅಂಗಗಳ ಫೋಟೋ ವಿನಿಮಯ ಮಾಡಿಕೊಳ್ಳುತ್ತ ಸುಖಿಸುತ್ತಿದ್ದರು. ಅವರಂತಹ ದೊಡ್ಡ ವ್ಯಕ್ತಿ ಹೀಗೆಲ್ಲ ಮಾಡುತ್ತಾರಾ ಎಂದು ನಾನು ಬೆರಗಾಗುತ್ತಿದ್ದೆ.
ನವೆಂಬರ್ ತಿಂಗಳ ಒಂದು ದಿನ. ನಾನು ರಾತ್ರಿ ಬೆಡ್‌ರೂಮಿಗೆ ಹೋದೆ. ಅಲ್ಲಿ ಬಿಳಿಯ ಬೆಡ್‌ಶೀಟ್ ಮೇಲೆ ಇಮ್ರಾನ್ ನಗ್ನವಾಗಿ ಮಲಗಿದ್ದರು. ತಮ್ಮ ಮೈಗೆಲ್ಲ ಕರಿ ಎಳ್ಳು ಹಾಕಿ ಉಜ್ಜಿಕೊಳ್ಳುತ್ತಿದ್ದರು. ನನ್ನನ್ನು ನೋಡುತ್ತಿದ್ದಂತೆ ಎದ್ದುನಿಂತು, ಕೆಲಸದಾಳನ್ನು ಕರೆದು ಅದನ್ನೆಲ್ಲ ತೆಗೆದುಕೊಂಡು ಹೋಗಲು ಹೇಳಿದರು. ನನಗೆ ಶಾಕ್. ಅದನ್ನು ಅರ್ಥ ಮಾಡಿಕೊಂಡ ಇಮ್ರಾನ್ ಸಮಜಾಯಿಷಿ ನೀಡಿದರು. ಅವರಿಗೆ ಯಾರೋ ಮಾಟ ಮಾಡಿಸಿದ್ದರಂತೆ. ಅದು ನಿವಾರಣೆಯಾಗಬೇಕು ಅಂದರೆ ನಗ್ನ ಮೈಗೆ ಕರಿ ಎಳ್ಳು ಹಾಕಿ ತಿಕ್ಕಿಕೊಳ್ಳಬೇಕು ಎಂದು ಅವರ ಬಾಮೈದ ಹೇಳಿದ್ದನಂತೆ. ನಾನು ಅವರಿಗೆ ನಿಷ್ಠ ಪತ್ನಿಯಾಗಿದ್ದೆ. ಅವರನ್ನು ನಿರ್ವಂಚನೆಯಿಂದ ಪ್ರೀತಿಸಿದೆ. ಆದರೆ, ಅವರ ಹುಚ್ಚಾಟಗಳು, ಮೂಢನಂಬಿಕೆಗಳು ಹಾಗೂ ಮೋಸವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನಗೂ ಬದುಕಿನಲ್ಲಿ ತತ್ವಾದರ್ಶಗಳಿಲ್ಲವೇ? ಅವು ನಮ್ಮ ಮದುವೆ ಮುಂದುವರೆಯಲು ಬಿಡಲಿಲ್ಲ.