ಬೆಂಗಳೂರಿನಲ್ಲಿ  ಮೇ 7ರಂದು ಕೆಕೆಆರ್ ಹಾಗೂ ಆರ್'ಸಿ'ಬಿ ಪಂದ್ಯ ನಡೆದು ಆ ಪಂದ್ಯದಲ್ಲಿ ಬೆಂಗಳೂರು ಕೋಲ್ಕತ್ತಾ ವಿರುದ್ಧ ಸೋಲು ಅನುಭವಿಸಿತ್ತು.

ಮುಂಬೈ(ಮೇ.09): ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳುವವರಿಗೇನು ಕಡಿಮೆಯೇನಿಲ್ಲ. ಆದರೆ ಬಾಲಿವುಡ್ ನಟನೊಬ್ಬ ಕೊಹ್ಲಿಯನ್ನು ಕೋತಿಯಂದು ಜರಿದಿದ್ದಾನೆ.

ಆ ನಟ ಮತ್ತಿನ್ಯಾರು ಅಲ್ಲ ಇತ್ತೀಚಿನ ದಿನಗಳಿಂದ ಸಿನಿಮಾ ನಟರನ್ನು ಅಣಕಿಸಿ ವಿವಾದಕ್ಕೀಡಾಗಿರುವ ಕಮಲ್ ಆರ್ ಖಾನ್. ಈತ ಅಂತಹ ಅದ್ಭುತ ನಟನೇನಲ್ಲ. ಒಂದೆರಡು ಚಿತ್ರಗಳಲ್ಲಿ ನಟಿಸಿ, ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದಾನೆ. ಬೆಂಗಳೂರಿನಲ್ಲಿ ಮೇ 7ರಂದು ಕೆಕೆಆರ್ ಹಾಗೂ ಆರ್'ಸಿ'ಬಿ ಪಂದ್ಯ ನಡೆದು ಆ ಪಂದ್ಯದಲ್ಲಿ ಬೆಂಗಳೂರು ಕೋಲ್ಕತ್ತಾ ವಿರುದ್ಧ ಸೋಲು ಅನುಭವಿಸಿತ್ತು.

ಪಂದ್ಯ ನಡೆಯುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ಕಮಲ್ ಆರ್ ಖಾನ್ ಟ್ವೀಟ್ ಮಾಡಿದ್ದ ನಟ, ಕೊಹ್ಲಿ ಮನವಿ ಮಾಡಿದ ತಕ್ಷಣ ಬ್ಯಾಟ್ಸ್'ಮೆನ್ ಔಟ್ ಎಂದು ತೀರ್ಪು ನೀಡಬೇಕು ಇಲ್ಲದಿದ್ದರೆ ಮೈದಾನದಲ್ಲಿ ಕೋತಿಯಂತೆ ನೆಗೆದಾಡುತ್ತಾನೆ. ಈ ಟ್ವೀಟ್'ಗೆ ಕಾರಣವಾಗಿದ್ದು ಅಂಪೈರ್ ಯೂಸುಫ್ ಪಠಾಣ್ ಆಟವಾಡುತ್ತಿದ್ದಾಗ ಬೌಲರ್ ಔಟ್ ಎಂದು ಮನವಿ ಮಾಡಿದ್ದರು. ಆಗ ಔಟ್ ನೀಡಿರಲಿಲ್ಲ. ಇದನ್ನು ಟ್ವೀಟ್ ಮಾಡುವಾಗ ಬಳಸಿಕೊಂಡಿದ್ದ ಆ ನಟ.ಅದಲ್ಲದೆ ಧೋನಿಯನ್ನು ಕೂಡ ಶೋಮ್ಯಾನ್ ಎಂಬಂತೆ ಬಣ್ಣಿಸಿದ್ದಾನೆ. ಧೋನಿ ಕಳಪೆ ಆಟವಾಡಿ ನಂತರ ಶೂ ಮ್ಯಾನ್ ರೀತಿ ವರ್ತಿಸುತ್ತಾರೆ ಎಂದು ಸಹ ಟ್ವೀಟ್ ಮಾಡಿದ್ದ.

ಮಲಯಾಳಿ ಸೂಪರ್ ಸ್ಟಾರ್'ಗಳಾದ ಮೋಹನ್ ಲಾಲ್ ಹಾಗೂ ಮಮ್ಮುಟ್ಟಿಯವರನ್ನು ಕೂಡ ಅಣಕಿಸಿ ಅಭಿಮಾನಿಗಳಿಂದ ಟೀಕೆಗೊಳಗಾಗಿದ್ದ.