ಅಂಧರ ವಿಶ್ವಕಪ್: ಬಾಂಗ್ಲಾದೇಶವನ್ನು ಬಗ್ಗುಬಡಿದ ಭಾರತ

First Published 13, Jan 2018, 10:15 PM IST
Blind Cricket World Cup 2018 Ajay Reddy lead India to victory against Bangladesh
Highlights

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 226 ರನ್ ಪೇರಿಸಿತು. 8 ಓವರ್ ಬೌಲಿಂಗ್ ಮಾಡಿದ ಅಭಿಷೇಕ್ ರೆಡ್ಡಿ 4 ವಿಕೆಟ್ ಕಬಳಿಸಿ ಬಾಂಗ್ಲಾ ಕುಸಿತಕ್ಕೆ ಕಾರಣರಾದರು. ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡದ ಆರಂಭಿಕರು ಬಾಂಗ್ಲಾದೇಶದ ಬೌಲರ್‌'ಗಳ ಬೆವರಿಳಿಸಿದರು.

ದುಬೈ(ಜ.13): 5ನೇ ಅಂಧರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದ್ದು, ನಾಯಕ ಅಜಯ್ ರೆಡ್ಡಿ ಅವರ ಆಲ್ರೌಂಡ್ ಆಟದ ನೆರವಿನಿಂದ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್‌'ಗಳ ಭರ್ಜರಿ ಜಯ ದಾಖಲಿಸಿದೆ. ಈ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭಾರತ ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 226 ರನ್ ಪೇರಿಸಿತು. 8 ಓವರ್ ಬೌಲಿಂಗ್ ಮಾಡಿದ ಅಭಿಷೇಕ್ ರೆಡ್ಡಿ 4 ವಿಕೆಟ್ ಕಬಳಿಸಿ ಬಾಂಗ್ಲಾ ಕುಸಿತಕ್ಕೆ ಕಾರಣರಾದರು. ಸವಾಲಿನ ಮೊತ್ತವನ್ನು ಬೆನ್ನತ್ತಿದ್ದ ಭಾರತ ತಂಡದ ಆರಂಭಿಕರು ಬಾಂಗ್ಲಾದೇಶದ ಬೌಲರ್‌'ಗಳ ಬೆವರಿಳಿಸಿದರು. ಕ್ರೀಸ್‌'ನಲ್ಲಿ ಗಟ್ಟಿಯಾಗಿ ನೆಲೆನಿಂತ ಅಭಿಷೇಕ್ ರೆಡ್ಡಿ 60 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 101 ರನ್ ಸಿಡಿಸಿದರೆ, ಮತ್ತೋರ್ವ ಆರಂಭಿಕ ದಾಂಡಿಗ ಸುನಿಲ್ ರಮೇಶ್ 57 ಎಸೆತಗಳಲ್ಲಿ 17 ಬೌಂಡರಿಗಳ ನೆರವಿನಿಂದ 105 ರನ್ ಸಿಡಿಸಿ ಕೇವಲ 18.4 ಓವರ್‌'ಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ: 226/8(40 ಓ)

ಭಾರತ : 227/0 (18.4ಓ)

loader