Commonwealth Games 2022: ನಾಲ್ಕನೇ ದಿನವಾದ ಇಂದು ಭಾರತಕ್ಕಿದು 3 ಪದಕ ಗೆಲ್ಲುವ ಸುವರ್ಣಾವಕಾಶ..!
ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಾಕಷ್ಟು ಮಹತ್ವದ ದಿನ
4ನೇ ದಿನದಲ್ಲಿ ಭಾರತಕ್ಕಿದೆ ಮೂರು ಪದಕ ಗೆಲ್ಲುವ ಅವಕಾಶ
ಈಗಾಗಲೇ 3 ಚಿನ್ನ ಸಹಿತ 6 ಪದಕ ಜಯಿಸಿರುವ ಭಾರತ
ಬರ್ಮಿಂಗ್‌ಹ್ಯಾಮ್(ಆ.01): 22ನೇ ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾನುವಾರ ಭಾರತೀಯ ಕ್ರೀಡಾಪಟು ಅದ್ಭುತ ಪ್ರದರ್ಶನ ತೋರುವ ಮೂಲಕ ಪದಕ ಜಯಿಸಿದರೇ, ಮತ್ತೆ ಕೆಲವು ಕ್ರೀಡಾಪಟುಗಳು ಪದಕಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸೋಮವಾರವಾದ ಇಂದು ಭಾರತ ಹಾಕಿ ತಂಡ, ಟೇಬಲ್ ಟೆನಿಸ್ ತಂಡಗಳು ಸೇರಿದಂತೆ ಹಲವು ಕ್ರೀಡಾಪಟುಗಳು ತಮ್ಮ ಪ್ರತಿಭೆ ಅನಾವರಣ ಮಾಡಲು ಎದುರು ನೋಡುತ್ತಿದ್ದಾರೆ.
ಸೋಮವಾರದ ಭಾರತದ ಪಾಲಿನ ಮೊದಲ ಸ್ಪರ್ಧೆಯಲ್ಲಿಯೇ ಚಿನ್ನದ ಪದಕ ಗೆಲ್ಲುವ ಅವಕಾಶವಿದೆ. ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅಜಯ್ ಸಿಂಗ್ ಸ್ಪರ್ಧಿಸುತ್ತಿದ್ದು, ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಭಾರತ ಈಗಾಗಲೇ ವೇಟ್‌ಲಿಫ್ಟಿಂಗ್‌ನಲ್ಲಿ 6 ಪದಕಗಳನ್ನು ಜಯಿಸಿದೆ. ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನ ಹಲವು ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯುತ್ತಿದ್ದಾರೆಯಾದರೂ, ಬಹುತೇಕ ಪಂದ್ಯಗಳು ಪ್ರಶಸ್ತಿ ಸುತ್ತಿಗೆ ಕೊಂಡೊಯ್ಯಲಿವೆ. ಆದರೆ ಇಂದು ಗರಿಷ್ಠವೆಂದರೆ ಮೂರು ಪದಕಗಳನ್ನು ಗೆಲ್ಲುವ ಅವಕಾಶವಿದೆ.
ಮೂರನೇ ದಿನದಾಟದ ಪ್ರದರ್ಶನ ಮುಂದುವರೆಸಲು ಕಾತರಿಸುತ್ತಿದೆ ಭಾರತ:
ಮೂರನೇ ದಿನ ಭಾರತ ಪುರುಷರ ಹಾಕಿ ತಂಡವು ಘಾನಾ ಎದುರು 11-0 ಅಂತರದ ಗೆಲುವು ದಾಖಲಿಸಿತ್ತು. ಇದೀಗ ಭಾರತ ಹಾಕಿ ತಂಡವು ತನ್ನ ಅದ್ಭುತ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ, ದಾಖಲೆ ಬರೆದ ಅಚಿಂತಾ ಶೆಯುಲಿ!
ಇನ್ನು ಭಾರತದ ಪ್ರಮುಖ ಸ್ಕ್ವಾಶ್ ಪಟು ಸೌರವ್ ಘೋಸಾಲ್ ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ತೋರಿದ ಪ್ರದರ್ಶನವನ್ನು ಮುಂದುವರೆಸಿಕೊಂಡು ಹೋಗಲು ತುದಿಗಾಲಿನಲ್ಲಿ ನಿಂತಿದ್ದರೇ, ಜೋಶ್ನಾ ಚಿನ್ನಪ್ಪ ಕೂಡಾ ತಮ್ಮ ಬಲಿಷ್ಠ ಪ್ರದರ್ಶನ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದ ನಾಲ್ಕನೇ ದಿನ ಭಾರತದ ಸ್ಪರ್ಧೆಗಳ ಕಂಪ್ಲೀಟ್ ವಿವರ ಹಾಗೂ ಪದಕ ಗೆಲ್ಲುವ ಅವಕಾಶವಿರುವ ಸ್ಪರ್ಧೆಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ..
ವೇಟ್‌ಲಿಫ್ಟಿಂಗ್- ಅಜಯ್ ಸಿಂಗ್ - ಪುರುಷರ 81 ಕೆಜಿ ವಿಭಾಗದ ಗೋಲ್ಡ್ ಮೆಡಲ್ ಮ್ಯಾಚ್ (ಸಮಯ: 2:00 PM)
ಜೂಡೋ - ವೈಯುಕ್ತಿ ವಿಭಾಗದ ಸ್ಪರ್ಧೆಗಳು ಮ್ಯಾಟ್ 1 ಮತ್ತು ಮ್ಯಾಟ್ 2 (2:30 PM ನಂತರ)
ಜೂಡೋ - ಜಸ್ಲೀನ್ ಸಿಂಗ್ ಸೈನಿ vs ಮ್ಯಾಕ್ಸೆನ್ಸ್ ಕುಗೊಲಾ - ಪುರುಷರ 66 ಕೆಜಿ 16ನೇ ಸುತ್ತಿನ ಪಂದ್ಯ (2:30 PM - 6:30 PM)
ಜೂಡೋ - ವಿಜಯ್ ಕುಮಾರ್ ಯಾದವ್ vs ವಿನ್ಸ್ಲೆ ಗಂಗಯ್ಯ - ಪುರುಷರ 60 ಕೆಜಿ 16ನೇ ಸುತ್ತಿನ ಪಂದ್ಯ (2:30 PM - 6:30 PM)
ಬಾಕ್ಸಿಂಗ್ - ಅಮಿತ್ ಪಂಘಲ್ vs ನಮ್ರಿ ಬೆರ್ರಿ - ಪ್ಲೈವೇಟ್(48kg-51kg) (04:45 PM)
ಸ್ಕ್ವಾಶ್ - ಹೊಲ್ಲಿ ನೌಟನ್ vs ಜೋಶ್ನಾ ಚಿನ್ನಪ್ಪ, ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ (06:00 PM)
ಬಾಕ್ಸಿಂಗ್ - ಹುಸ್ಮದ್ದೀನ್ vs ಸಲಿಮ್ ಹೊಸೈನ್ - ಫೆದರ್‌ವೇಟ್ (54-57 kg) (06:00 PM)
ಸ್ಕ್ವಾಶ್ - ಸೌರವ್ ಘೋಷಲ್ vs ಗ್ರೆಗ್ ಲೊಬ್ಬಾನ್ - ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ (06:45 PM)
ಹಾಕಿ - ಭಾರತ vs ಇಂಗ್ಲೆಂಡ್ - ಪುರುಷರ ಪೋಲ್ 'ಬಿ' ಹಾಕಿ ಪಂದ್ಯ (08:30 PM)
ಬ್ಯಾಡ್ಮಿಂಟನ್: ಮಿಶ್ರ ಟೀಂ ಸೆಮಿಫೈನಲ್ (10:00 PM)
ಟೇಬಲ್ ಟೆನಿಸ್: ಭಾರತ vs ನೈಜೀರಿಯಾ - ಪುರುಷರ ಸೆಮಿಫೈನಲ್ ಪಂದ್ಯ (11:30 PM)
ವೇಟ್‌ಲಿಫ್ಟಿಂಗ್ - ಹರ್ಜಿಂದರ್ ಕೌರ್ - ಮಹಿಳಾ 71 kg ವಿಭಾಗದ ಮೆಡಲ್ ಮ್ಯಾಚ್ (11:00 PM)
ಬಾಕ್ಸಿಂಗ್ - ಆಶಿಶ್ ಕುಮಾರ್ vs ತ್ರಾವಿಸ್ - ಲೈಟ್ ಹೆವಿವೇಟ್ (75-80 kg) (01:00 AM)
ಸ್ವಿಮ್ಮಿಂಗ್ - ಶ್ರೀಹರಿ ನಟರಾಜ್ - ಪುರುಷರ 50 ಮೀಟರ್ ಬ್ಯಾಕ್‌ಸ್ಟ್ರೋಕ್ ಫೈನಲ್ (01:07 AM)
(* ಪದಕ ಗೆಲ್ಲಬಲ್ಲ ಪಂದ್ಯಗಳ ವಿವರಗಳನ್ನು ದಪ್ಪಕ್ಷಗಳಲ್ಲಿ ಸೂಚಿಸಲಾಗಿದೆ)