ಸಿಡ್ನಿ(ಜ.21): ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕ್ಕಲಂ ಕ್ಯಾಚ್ ಪ್ರಯತ್ನ ಇದೀಗ ಭಾರಿ ವೈರಲ್ ಆಗಿದೆ. ಸಿಡ್ನಿ ಸಿಕ್ಸರ್ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮೆಕಲಂ ಸಿಕ್ಸರ್ ಹೊಡೆತವನ್ನ ಅದ್ಬುತವಾಗಿ ತಡೆದು ತಂಡಕ್ಕೆ ನೆರವಾದರು.

ಇದನ್ನೂ ಓದಿ: ಮಾಜಿ ಕ್ರಿಕೆಟಿಗನಿಗೆ ಅಪಘಾತ- ನೆರವಿಗೆ ದಾವಿಸಿದ ಟೀಂ ಇಂಡಿಯಾ ದಿಗ್ಗಜರು!

ಜೇಮ್ಸ್ ವಿನ್ಸ್ ಸಿಡಿಸಿದ ಸಿಕ್ಸರ್ ಹೊಡೆತವನ್ನ ತಡೆದ ಮೆಕ್ಕಲಂ ಕ್ಯಾಚಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಆದರೆ ಸಿಕ್ಸರ್ ತಡೆಯೋ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 37 ವರ್ಷದ ಮೆಕಲಂ ಫಿಟ್ನೆಸ್‌ಗೆ ಶ್ಲಾಘನೆ ವ್ಯಕ್ತವಾಗಿದೆ.

 

 

ಇದನ್ನೂ ಓದಿ: ಬಿಸಿಸಿಐ ಕೈಪಿಡಿ ಓದದ ಹಾರ್ದಿಕ್‌, ರಾಹುಲ್‌?

ಮೆಕಲಂ ಈ ರೀತಿ ಫೀಲ್ಡಿಂಗ್ ಮಾಡುತ್ತಿರುವುದು ಇದೇ ಮೊದಲಲ್ಲ. ಹಲವು ಬಾರಿ ಡೈವ್ ಮೂಲಕ ಅದ್ಬುತ ಕ್ಯಾಚ್ ಹಿಡಿದಿದ್ದಾರೆ. ಇಷ್ಟೇ ಅಲ್ಲ ಎದುರಾಳಿ ತಂಡಕ್ಕೆ ಅಚ್ಚರಿ ಆಘಾತ ನೀಡಿದ್ದಾರೆ. ಇದೀಗ ಸಿಕ್ಸರ್ ಸಿಹಿಯಲ್ಲಿದ್ದ ಜೇಮ್ಸ್ ವಿನ್ಸ್‌ಗೂ ಇದೇ ರೀತಿ ಶಾಕ್ ನೀಡಿದ್ದಾರೆ.