ಮಾಜಿ ಆಟಗಾರ ಜಹೀರ್ ಖಾನ್ ಕೂಡ ಗುರುವಾರ ತಮ್ಮ ಬಹುಕಾಲದ ಗೆಳತಿ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ಮುಂಬೈ'ನಲ್ಲಿ ವಿವಾಹವಾದರು. ನ.27ರಂದು ಇವರಿಬ್ಬರ ಆರತಕ್ಷತೆ ಮುಂಬೈ'ನಲ್ಲಿ ನಡೆಯಲಿದೆ.  

ಮೀರತ್(ನ.24): ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ ತಮ್ಮ ಪ್ರೇಯಸಿ ನೂಪುರ್ ನಗರ್ ಜತೆ ಗುರುವಾರ ದಾಂಪತ್ಯ ಜೀವಕ್ಕೆ ಕಾಲಿಟ್ಟರು. ಉಭಯ ಕುಟುಂಬಗಳ ಬಂಧುಗಳು, ಆಪ್ತರ ಸಮ್ಮುಖದಲ್ಲಿ ಭುವಿ, ನೂಪುರ್ ವಿವಾಹ ಅದ್ಧೂರಿಯಾಗಿ ನೇರವೇರಿತು. ನ.26ರಂದು ನೂಪುರ್‌ರ ಹುಟ್ಟೂರಾದ ಮೀರತ್‌ನಲ್ಲಿ ಹಾಗೂ ನ.30ರಂದು ದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಲಾಗಿದೆ.

ಮಾಜಿ ಆಟಗಾರ ಜಹೀರ್ ಖಾನ್ ಕೂಡ ಗುರುವಾರ ತಮ್ಮ ಬಹುಕಾಲದ ಗೆಳತಿ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ಮುಂಬೈ'ನಲ್ಲಿ ವಿವಾಹವಾದರು. ನ.27ರಂದು ಇವರಿಬ್ಬರ ಆರತಕ್ಷತೆ ಮುಂಬೈ'ನಲ್ಲಿ ನಡೆಯಲಿದೆ.