ಕ್ರಿಕೆಟ್ ಆಟದ ನಡುವೆ ತಂಪು ಪಾನಿಯ ಸರಬರಾಜು ಮಾಡಲು ಹಲವು ವಾಹನ್ನಗಳನ್ನ ಬಳಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಆಟೋ ರಿಕ್ಷಾದಲ್ಲಿ ಡ್ರಿಂಕ್ಸ್ ಸರಬರಾಜು ಮಾಡೋ ಮೂಲಕ ಗಮನಸೆಳೆದಿದ್ದಾರೆ.
ಲಂಡನ್(ಆ.07): ಇಂಗ್ಲೆಂಡ್‌ನ ಕ್ಲಬ್ ಕ್ರಿಕೆಟ್ ಪಂದ್ಯವೊಂದರಲ್ಲಿ ಡ್ರಿಂಕ್ಸ್ ಬ್ರೇಕ್ ವೇಳೆ ಆಟೋ ರಿಕ್ಷಾದಲ್ಲಿ ತಂಪು ಪಾನೀಯವನ್ನು ಮೈದಾನಕ್ಕೆ ಕೊಂಡೊಯ್ದ ಪ್ರಸಂಗ ನಡೆದಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯದಲ್ಲಿ ಡ್ರಿಂಕ್ಸ್‌ಗೆ ಆಟೋ ರಿಕ್ಷಾ ಬಳಸಲಾಗಿದೆ.
ಇಂಗ್ಲೆಂಡ್‌ನಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೇರಿ ರಚಿಸಿಕೊಂಡಿರುವ ‘ಭಾರತ್ ಆರ್ಮಿ’ ಎನ್ನುವ ಗುಂಪು ಆಟೋದಲ್ಲಿ ತಂಪು ಪಾನೀಯ ಸರಬರಾಜು ಮಾಡಿ ಗಮನ ಸೆಳೆದಿದೆ. ಟ್ವೀಟರ್‌ನಲ್ಲಿ ವಿಡಿಯೋ ಸಹ ಹಾಕಿರುವ ‘ಭಾರತ್ ಆರ್ಮಿ’,ಬಿಸಿಸಿಐಗೂ ಆಟೋ ಬಳಸುವಂತೆ ಸಲಹೆ ನೀಡಿದೆ. ವಿಡಿಯೋ ವೈರಲ್ ಆಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ್ ಆರ್ಮಿ ಅಭಿಮಾನಿ ಬಳಗ, ವಿರಾಟ್ ಕೊಹ್ಲಿಗಾಗಿ ವಿಶೇಷ ಹಾಡೊಂದನ್ನ ರಚಿಸಿತ್ತು. ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಭಾರತ್ ಆರ್ಮಿ ಫ್ಯಾನ್ಸ್, ಕೊಹ್ಲಿ ಹಾಡಿನ ಸ್ಯಾಂಪಲ್ ಹಾಡಿದ್ದರು.
